ಮೈಸೂರು, ನವೆಂಬರ್ 29, 2020 (www.justkannada.in): ಡಿ.5ಕ್ಕೆ ಕರ್ನಾಟಕ ಬಂದ್ ಶತಸಿದ್ದ ಎಂದು ಮೈಸೂರಿನಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.
ನ.30ರ ವರೆಗೆ ರಾಜ್ಯ ಸರ್ಕಾರ ಮರಾಠ ಪ್ರಾಧಿಕಾರ ಹಿಂಪಡೆಯಬೇಕು. ಈ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಹಠ ಮಾಡಬಾರದು. ಬಿಎಸ್ವೈ ಯಿಂದ ಕರ್ನಾಟಕ ಉದ್ದಾರ ಆಗೊಲ್ಲ, ಗಡಿನಾಡು ಉದ್ದಾರ ಆಗೋಲ್ಲ. ಕರ್ನಾಟಕ ಸರ್ಕಾರ ಮರಾಠರ ಅಭಿವೃದ್ಧಿಗೆ ಪ್ರಾಧಿಕಾರ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ತಮಿಳರು, ಆಂದ್ರದವರು, ಮಲೆಯಾಳಿಯವರು ಎಲ್ಲರೂ ಪ್ರಾಧಿಕಾರ ಕೇಳ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಬಿಎಸ್ವೈಗೆ ಬುದ್ದಿ ಇದ್ಯೋ ಇಲ್ವೋ ಗೊತ್ತಿಲ್ಲ. ಎರಡು ವರ್ಷದ ಹಿಂದೆ ನಮ್ಮನ್ನು ಜೈಲಿನಲ್ಲಿಟ್ಟು ತಿರುವಳ್ಳುವರ್ ಪ್ರತಿಮೆ ಮಾಡಿದ್ರು. ಬಸವ ಕಲ್ಯಾಣದಲ್ಲಿ ಚುನಾವಣೆ ಹಿನ್ನೆಲೆ ಅಲ್ಲಿರುವ 30ಸಾವಿರ ಮರಾಠ ಮತ ಪಡೆಯಲು ಪ್ರಾಧಿಕಾರ ಮಾಡಿದ್ದಾರೆ. ಸಿಎಂ ಯಡಿಯೂರಪ್ಪ ಬರೀ ಬೋಗಸ್ ಮಾಡ್ತಿದ್ದಾರೆ ಎಂದು ಸಿಎಂ ವಿರುದ್ಧ ವಾಟಾಳ್ ನಾಗರಾಜ್ ಕಿಡಿಕಾರಿದರು.
ತೂ..ತೂ..ಅವರಿಬ್ರೂ ಯಾರ್ರಿ ದರಿದ್ರ…
ಬಂದ್ ವಿಚಾರವಾಗಿ ಯತ್ನಾಳ್ ಹಾಗೂ ರೇಣುಕಾಚಾರ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ವಿರುದ್ಧ ಕೆಂಡಾಮಂಡಲರಾದ ವಾಟಾಳ್ ನಾಗರಾಜ್, ತೂ..ತೂ..ಅವರಿಬ್ರೂ ಯಾರ್ರಿ ದರಿದ್ರ..? ನಾಯಿಗಳಿಗಾದ್ರೂ ಉತ್ತರ ಕೊಡ್ತಿನಿ ಆದ್ರೆ ರೇಣುಕಾಚಾರ್ಯ ಹಾಗೂ ಯತ್ನಾಳ್ ಬಗ್ಗೆ ಪ್ರತಿಕ್ರಿಯಿಸಲ್ಲ. ರೇಣುಕಾಚಾರ್ಯ ವೀಡಿಯೋಗಳು ವಾಟ್ಸಾಪ್ ನಲ್ಲಿ ಹರಿದಾಡ್ತಿವೆ. ಅಂತಹವರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲವೆಂದು ವಾಟಾಳ್ ನಾಗರಾಜ್ ವ್ಯಂಗ್ಯವಾಡಿದರು.