ಮೈಸೂರು,ಆಗಸ್ಟ್,23,2022(www.justkannada.in): ವೀರ ಸಾವರ್ಕರ್ ಬಗ್ಗೆ ಕನ್ನಡ ನಾಡಿನಲ್ಲಿ ಅಪಪ್ರಚಾರ ಮಾಡುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಸಾವರ್ಕರ್ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಿಎಂ ಬಿಎಸ್ ವೈ, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೈಸೂರಿಗೆ ಇಂದು ವಿಶೇಷ ಸ್ಥಾನಮಾನವಿದೆ. ಇಂತಹ ಪುಣ್ಯ ಭೂಮಿಯಲ್ಲಿ ಸಾವರ್ಕರ್ ರಥಯಾತ್ರೆಗೆ ಚಾಲನೆ ನೀಡುತ್ತಿರುವುದು ನನ್ನ ಸೌಭಾಗ್ಯ. ಅಷ್ಟ ದಿಕ್ಕುಗಳಲ್ಲಿ ವೀರ ಸಾವರ್ಕರ್ ಅವರ ಜೀವನ ಮೌಲ್ಯ, ತ್ಯಾಗವನ್ನ ಪಸರಿಸಲಿ ಎಂದು ಹಾರೈಸುತ್ತೇನೆ ಎಂಧರು.
ಒಂದೆಡೆ ದೇಶ ವಿಶ್ಚಗುರು ಆಗಲು ದಾಪುಗಾಲು ಹಾಕುತ್ತಿದೆ. ದೇಶದ ಮೌಲ್ಯಗಳಿಗೆ ಮಸಿ ಬಳಿಯುವ ಕೆಲಸ ಆಗುತ್ತಿದೆ. ಸಾವರ್ಕರ್ ಬಗ್ಗೆ ಅಪಪ್ರಚಾರ ಕೂಡ ಆಗುತ್ತಿದೆ. ಸಾವರ್ಕರ್ ಸಂದೇಶವನ್ನ ಮನೆ ಮನಸ್ಸುಗಳಿಗೆ ತಿಳಿಸಬೇಕು ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದರು. ದೇಶದ ಮೊದ ಮಹಿಳಾ ಪ್ರಧಾನಿ ಇಂದಿರಾಗಾಂಧಿ ಅವರಿಂದ ಸ್ವಾತಂತ್ರ್ಯ ಯೋಧ ಎಂದು ಬಿರುದು ಪಡೆದಿದ್ದರು. ಸಾವರ್ಕರ್ ಅವರನ್ನ ಸ್ವಾತಂತ್ರ್ಯ ಯೋಧ ಎಂದು ಕರೆಯಲು ವಿರೋಧಿಸುವವರು ಬಸವಣ್ಣನ ವಚನ ತಿಳಿದುಕೊಳ್ಳಬೇಕು. ಶರಣರ ಗುಣವನ್ನ ಮರಣದಲ್ಲಿ ನೋಡಿ ಎಂದು ನಮ್ಮ ಹಿರಿಯರು ಹೇಳಿದ್ದರು. ವೀರ ಸಾವರ್ಕರ್ ಬಗ್ಗೆ ಕನ್ನಡ ನಾಡಿನಲ್ಲಿ ಅಪಪ್ರಚಾರ ಅಕ್ಷಮ್ಯ ಅಪರಾಧ.
ಸಾವರ್ಕರ್ ಅಂತಿಮ ಯಾತ್ರೆಯಲ್ಲಿ ಎಲ್ಲಾ ಪಕ್ಷದ ನಾಯಕರು ಭಾಗಿಯಾಗಿದ್ದರು. ಇಡೀ ಮುಂಬೈ ನಗರವೇ ಆಂತಿಮ ಯಾತ್ರೆಗೆ ಸೇರಿತ್ತು. ಸಾವರ್ಕರ್ ಭಾರತ ಮಾತೆಯ ಹೆಮ್ಮಯ ಕುವರ. ಸಾವರ್ಕರ್ ಮಾತು ನಮಗೆ ದಾರಿದೀಪ. ದೇಶಕ್ಕಾಗಿ ತನ್ನ ಪದವಿಯನ್ನೇ ತಿರಸ್ಕರಿಸಿದ ಮೊದಲ ಹೋರಾಟಗಾರ. ವಿದೇಶಿ ವಸ್ತು ಬಹಿಷ್ಕರಿಸಿ ,ಬ್ಯಾರಿಷ್ಟರ್ ತಿರಸ್ಕರಿಸಿದ್ದರು ಎಂದು ಗುಣಗಾನ ಮಾಡಿದರು.
Key words: Veer Savarkar –mysore- Former CM- BS Yeddyurappa.