ಬೆಂಗಳೂರು, ಜೂನ್ 02, 2021 (www.justkannada.in): ಸಸ್ಯಾಹಾರ ಹಾಗೂ ಮೊಟ್ಟೆ ಕುರಿತು ಟೀಂ ಇಂಡಿಯಾ ನಾಯಕ ವಿರಾಟ ಕೊಹ್ಲಿ ಸ್ಪಷ್ಟನೆ ನೀಡಿದ್ದಾರೆ.
ಮೊಟ್ಟೆ ಸೇವನೆ ಕುರಿತು ಮಾತನಾಡಿದ್ದ ಕೊಹ್ಲಿ ಹೇಳಿಕೆ ಸಾಕಷ್ಟು ಟ್ರೋಲ್ ಆಗಿತ್ತು. ಇದುವರೆಗೆ ನಾನು ಫಿಟ್ನೆಸ್ ಗಾಗಿ ಸಸ್ಯಾಹಾರಿಯಾಗಿದ್ದೇನೆ ಎನ್ನುತ್ತಿದ್ದ ಕೊಹ್ಲಿ, ಈಗ ಮೊಟ್ಟೆ ಸೇವಿಸುತ್ತಿರುವುದಾಗಿ ಹೇಳಿದ್ದರು. ಇದಕ್ಕೆ ನೆಟ್ಟಿಗರಿಂದ ಸಾಕಷ್ಟು ಟೀಕೆಗೊಳಗಾಗಿತ್ತು.
ಮೊಟ್ಟೆ ಸಸ್ಯಾಹಾರವೇ? ಕೊಹ್ಲಿ ಯಾವ ಪರಿಯ ಸಸ್ಯಾಹಾರಿ ಎಂದು ಹಲವರು ಟ್ರೋಲ್ ಮಾಡಿದ್ದರು. ನಾನು ವೇಗನ್ ಎಂದು ಯಾವತ್ತೂ ಹೇಳಿಲ್ಲ. ಸಸ್ಯಾಹಾರ ಸೇವಿಸುತ್ತೇನೆ ಎಂದಷ್ಟೇ ಹೇಳಿದ್ದೆ ಎಂದು ಕೊಯ್ಲಿ ಸ್ಪಷ್ಟನೆ ನೀಡಿದ್ದಾರೆ.