ಬೆಂಗಳೂರು,ನವೆಂಬರ್,16,2020(www.justkannada.in) ; ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರ ಅತ್ಯಂತ ಪ್ರಸಿದ್ಧ ಕೃತಿಗಳಲ್ಲಿ ಒಂದಾದ ಮೂಕನ ಮಕ್ಕಳು ಕೃತಿ ಸಿನಿಮಾ ರೂಪದಲ್ಲಿ ಸಿದ್ಧಗೊಂಡಿದ್ದು, ಅತಿ ಶೀಘ್ರದಲ್ಲಿ ತೆರೆಮೇಲೆ ಬರಲಿದೆ.
ಕರಿಗಿರಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಜ್ಜಾಗುತ್ತಿರುವ ಚಿತ್ರಕ್ಕೆ ಪವಿತ್ರಾ ಕ್ರಿಷ್ ಗೌರಿಬಿದನೂರು ನಿರ್ಮಾಪಕಿ. ರಂಗಭೂಮಿ ಕಲಾವಿದರಾದ ಹಾಗೂ ಈ ಹಿಂದೆ ಶಂಭೋ ಮಹಾದೇವ ಸಿನಿಮಾ ನಿರ್ದೇಶಿಸಿದ್ದ ಮೈಸೂರು ಮಂಜು ಸದ್ಯ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಹಾಗೂ ಸಹ ನಿರ್ದೇಶನವನ್ನು ಮಂಜು ಕ್ರಿಷ್ ಗೌರಿಬಿದನೂರು ಮಾಡಿದ್ದಾರೆ.
ಭಾವನಾತ್ಮಕ ಸಂಕೋಲೆಯ ಕಥಾಹಂದರವುಳ್ಳ ಈ ಸಿನಿಮಾ
ಪರಿಸರದಲ್ಲಿ ನಡೆಯುವ ಭಾವನಾತ್ಮಕ ಸಂಕೋಲೆಯ ಕಥಾಹಂದರವುಳ್ಳ ಈ ಸಿನಿಮಾದಲ್ಲಿ, ಮೊದಲ ಬಾರಿಗೆ ವಿಶೇಷ ಚೇತನನ ಪಾತ್ರದಲ್ಲಿ ಮಂಜು ಕ್ರಿಷ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ನಾಗರಾಜ ಶೆಟ್ಟಿ ಮಳಗಿ ಛಾಯಾಗ್ರಹಣವಿದ್ದು, ಗಣೇಶ್ ಭಟ್ ಸಂಗೀತ ಸಂಯೋಜನೆಯಿದೆ. ಜೊತೆಗೆ, ಸಿನಿಮಾದ ಸಂಕಲವನ್ನು ಸಂಜೀವ ರೆಡ್ಡಿ ಮಾಡಿದ್ದಾರೆ.
ಅಮರಿಕದ ಎರಡು ಇಂಟರ್ ನ್ಯಾಷನಲ್ ಫೆಸ್ಟಿವಲ್ ಗೆ ಈ ಚಿತ್ರ ಆಯ್ಕೆ
ಈಗಾಗಲೇ, ಮೂಕನ ಮಕ್ಕಳು ಕೊಲ್ಕತ್ತ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಪ್ರದರ್ಶನಗೊಂಡು ಉತ್ತಮ ಚಿತ್ರವೆಂಬ ಖ್ಯಾತಿ ಪಡೆದಿದೆ. ಇದಲ್ಲದೆ, ಅಮರಿಕದ ಎರಡು ಇಂಟರ್ ನ್ಯಾಷನಲ್ ಫೆಸ್ಟಿವಲ್ ಗೆ ಈ ಚಿತ್ರ ಆಯ್ಕೆಯಾಗಿದೆ. ಜೊತೆಗೆ ಪನೋರಮಾ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ಸಜ್ಜಾಗಿದೆ.
ಚಿತ್ರಕ್ಕೆ ಚಿತ್ರರಂಗದ ಹಲವರಿಂದ ಬಹಳಷ್ಟು ಮೆಚ್ಚುಗೆ
ಚಿತ್ರರಂಗದ ಹಲವರಿಂದ ಬಹಳಷ್ಟು ಮೆಚ್ಚುಗೆ ಪಡೆದಿರುವ ಈ ಚಿತ್ರ ಮುಂದಿನ ವರ್ಷ ತೆರೆಗೆ ಬರುವ ಸಿದ್ಧತೆಯಲ್ಲಿದೆ. ಮಾಸ್ತಿ ಅವರ ಮೂಕನ ಮಕ್ಕಳು ಕೃತಿ ಬಹಳಷ್ಟು ಜನಪ್ರಿಯತೆಯನ್ನು ಪಡೆದಿತ್ತು. ಅದೇ ರೀತಿ ಸಿನಿಮಾ ಕೂಡ ಪ್ರಸಿದ್ಧತೆಯನ್ನು ಪಡೆಯುತ್ತದೆಯೇ ಎಂದು ಕಾದು ನೋಡಬೇಕಿದೆ.
key words ; Very-soon-Mosti Venkatesha Iyengar-Book-Cinema-screen