ಮೈಸೂರು,ನವೆಂಬರ್,29,2024 (www.justkannada.in): ಬಾಂಗ್ಲಾದೇಶದ ಹಿಂದೂಗಳಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿ ಮೈಸೂರಿನಲ್ಲಿ ವಿಶ್ವ ಹಿಂದೂ ಪರಿಷತ್ ಮೈಸೂರು ನಗರ ಜಿಲ್ಲಾ ಘಟಕ ವತಿಯಿಂದ ಪ್ರತಿಭಟನೆ ನಡೆಯಿತು.
ಸಿದ್ದಾರ್ಥ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಂಭಾಗದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಮಹೇಶ್ ಕಾಮತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಬಾಂಗ್ಲಾದೇಶದ ಹಿಂದೂಗಳಿಗೆ ರಕ್ಷಣೆ ನೀಡುವಂತೆ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷರಾದ ಅಂಬಿಕಾ , ಕಾರ್ಯದರ್ಶಿ ಮಧು ಶಂಕರ , ಮಮತಾ ಜೀ, ಬಾಜಪ ರಾಷ್ಟ್ರೀಯ ಸದಸ್ಯರು ಸವಿತಾ ಘಾಟ್ಕೆ, ಗೋಪಾಲ್ , ಶಿವಕುಮಾರ, ವಿಜಯೇಂದ್ರ, ರಾಧಾಕೃಷ್ಣ. ಆರ್, ಸಹ ಕಾರ್ಯದರ್ಶಿ ಎಸ್. ಜಯಶ್ರೀ, ಚೇತನ, ಮಂಜುನಾಥ ಹಾಗೂ ಹಲವು ಹಿಂದೂ ಪರ ಸಂಘಟಣೆಯ ಸದಸ್ಯರು ಉಪಸ್ಥಿತರಿದ್ದರು.
Key words: Vishwa Hindu Parishad, protests, mysore