ಚಾಮರಾಜನಗರ,ಡಿಸೆಂಬರ್,16,2020(www.justkannada.in): ವಿದ್ಯಾಗಮ ಯೋಜನೆ ಆರಂಭವು ಶಾಲೆ ಆರಂಭದ ಮುನ್ಸೂಚನೆ ಅಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಶಿಕ್ಷಕರು ಮತ್ತು ಮಕ್ಕಳಿಗೆ ಕೊರೋನಾ ಹರಡುತ್ತಿದ್ದ ಹಿನ್ನೆಲೆ ಅಕ್ಟೋಬರ್ 10 ರಂದು ಸ್ಥಗಿತಗೊಳಿಸಲಾಗಿದ್ದ ವಿದ್ಯಾಗಮ ಯೋಜನೆಯನ್ನ ಮತ್ತೆ ಪ್ರಾರಂಭಿಸಲಾಗಿದೆ. ಈ ಕುರಿತು ಚಾಮರಾಜನಗರದಲ್ಲಿ ಪ್ರತಿಕ್ರಿಯಿಸಿರುವ ಸಚಿವ ಸುರೇಶ್ ಕುಮಾರ್, ರಾಜ್ಯದಲ್ಲಿ ಕೊರೋನಾ ಸೋಂಕಿತ ಪ್ರಮಾಣ ಕಡಿಮೆ ಇದೆ. ಪಾಸಿಟಿವ್ ರೇಟ್ ಶೇ.1 ಕ್ಕಿಂತ ಕಡಿಮೆ ಇದೆ. ಮಕ್ಕಳು ಶಿಕ್ಷಣದಿಂದ ವಂಚಿತರಾದರೇ ಬಾಲಕಾರ್ಮಿಕರಾಗುವ ಸಾಧ್ಯತೆ ಇದೆ. ಗ್ರಾಮೀಣ ಭಾಗಗಳಲ್ಲಿ ಬಾಲ್ಯ ವಿವಾಹಗಳಾಗುವ ಸಾಧ್ಯತೆ ಇದೆ.
ಹೀಗಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಅದ್ದರಿಂದ ವಿದ್ಯಾಗಮ ಯೋಜನೆ ಮತ್ತೆ ಪ್ರಾರಂಭಿಸಲಾಗಿದೆ. ಆದರೆ ವಿದ್ಯಾಗಮ ಯೋಜನೆ ಆರಂಭವು ಶಾಲೆ ಆರಂಭದ ಮುನ್ಸೂಚನೆ ಅಲ್ಲ ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
Key words: vidyagama-School – not-start- Education Minister -Suresh Kumar -clarified.