ಮುಂಬೈ, ಅಕ್ಟೋಬರ್ 22, 2019 (www.justkannada.in): ವಿಜಯ್ ಅಭಿನಯದ ‘ಬಿಗಿಲ್’ ಸಿನಿಮಾ ಹವಾ ಆವರಿಸಿದೆ.
ಇದೇ ಸಿನಿಮಾದ ಹಾಡೊಂದು ಪರೀಕ್ಷೆ ಉತ್ತರ ಪತ್ರಿಕೆಯಲ್ಲಿಯೂ ಕಾಣಿಸಿಕೊಂಡಿದ್ದು, ಟ್ವಿಟರ್ನಲ್ಲಿ ವೈರಲ್ ಆಗಿದೆ.
ಎಕಾನಾಮಿಕ್ ಡಿಮ್ಯಾಂಡ್ ವ್ಯಾಖ್ಯಾನಿಸಿ ಎನ್ನುವ ಪ್ರಶ್ನೆಗೆ ವಿದ್ಯಾರ್ಥಿಯೋರ್ವ ಬಿಗಿಲ್ ಸಿನಿಮಾದ ಹಾಡಿನ ಸಾಲನ್ನು ಬರೆದಿದ್ದಾನೆ. ಎಕನಾಮಿಕ್ ಡಿಮ್ಯಾಂಡ್ ಎಂದರೆ ಎಂದು ಆರಂಭಿಸಿ ಆ ಬಳಿಕ ಬಿಗಿಲ್ ಚಿತ್ರದ ‘ವೆರಿತನಮ್’ ಹಾಡಿನ ಸಾಹಿತ್ಯವನ್ನು ಸಂಪೂರ್ಣವಾಗಿ ಬರೆದಿದ್ದಾನೆ.
ಸದ್ಯ ವೈರಲ್ ಆಗಿರುವ ಈ ಉತ್ತರ ಪತ್ರಿಕೆ ವೆರಿತನಮ್ ಸಾಹಿತ್ಯ ರಚನೆಕಾರ ವಿವೇಕ್ ಅವರನ್ನೂ ತಲುಪಿದೆ. ಟ್ವಿಟರ್ನಲ್ಲಿ ಉತ್ತರ ಪತ್ರಿಕೆಯನ್ನು ಹಂಚಿಕೊಂಡಿರುವ ವಿವೇಕ್, ನಾನು ವಿದ್ಯಾರ್ಥಿಯಾಗಿದ್ದಾಗ ಸಚಿನ್ ಇನ್ನಿಂಗ್ಸ್ ಬಗ್ಗೆ ಹೀಗೆ ಬರೆದಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.