ಮೈಸೂರು,ಅಕ್ಟೋಬರ್,21,2020(www.justkannada.in): ಕೊರೋನಾ ಹಿನ್ನೆಲೆ ಆಯುಧ ಪೂಜೆ ಮತ್ತು ವಿಜಯದಶಮಿದಲ್ಲಿ ಹೆಚ್ಚಿನ ಜನಸಂದಣಿ ಸೇರುವುದನ್ನ ನಿಯಂತ್ರಿಸಲು ನಗರದ ದೇವರಾಜ ಮಾರುಕಟ್ಟೆ ಹೂವಿನ ವ್ಯಾಪಾರವನ್ನು ಜೆ.ಕೆ ಮೈದಾನಕ್ಕೆ ಸ್ಥಳಾಂತರಿಸಿ ಮೈಸೂರು ಮಹಾನಗರ ಪಾಲಿಕೆ ಆದೇಶಿಸಿದೆ.
ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ವೇಳೆ ಹೂ ಹಣ್ಣು ಕೊಳ್ಳಲು ಜನರು ಹೆಚ್ಚಾಗಿ ಆಗಮಿಸುತ್ತಾರೆ. ಇದರಿಂದಾಗಿ ಕೊರೋನಾ ಹೆಚ್ಚಾಗಿ ಹರಡುವ ಸಾಧ್ಯತೆ ಇದ್ದು, ಹೀಗಾಗಿ ಅಕ್ಟೋಬರ್ 23, 24 ಮತ್ತು 25 ಮೂರು ದಿನಗಳ ಕಾಲ ದೇವರಾಜ ಮಾರುಕಟ್ಟೆಯ ಹೂವಿನ ವ್ಯಾಪಾರವನ್ನ ಜೆ.ಕೆ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ.
ಜನ ಸಂದಣಿ ಮತ್ತು ಕೋವಿಡ್ ತಡೆಗಟ್ಟುವ ಸಲುವಾಗಿ ದೇವರಾಜ ಮಾರುಕಟ್ಟೆಯ ಹೂವಿನ ವ್ಯಾಪಾರವನ್ನು ನಗರ ಜೆ.ಕೆ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಮಾಹಿತಿ ನೀಡಿದೆ. ಹಬ್ಬಕ್ಕೆ ಹೂವಿನ ಖರೀದಿಗಾಗಿ ಹೆಚ್ಚಿನ ಜನ ಆಗಮಿಸುವುದರಿಂದ ಹೂವಿನ ಮಾರುಕಟ್ಟೆ ಸ್ಥಳಾಂತರ ಮಾಡಲಾಗಿದೆ.
Key words: Vijayadashami-ayudha pooja-mysore- Devaraja Market -Flower market- shift