ವಿಜಯಪುರ,ಜೂ,1,2021(www.justkannada.in): ಸಚಿವ ಸಿ.ಪಿ ಯೋಗೇಶ್ವರ್ ವಿರುದ್ಧ ಕ್ರಮ ಕೈಗೊಳ್ಳಲು ಸಿಎಂ ಬಿಎಸ್ ಯಡಿಯೂರಪ್ಪಗೆ ಶಕ್ತಿ ಇಲ್ಲ. ಯೋಗೇಶ್ವರ್ ವಿರುದ್ಧ ಕ್ರಮ ಕೈಗೊಂಡರೆ ಒಂದೇ ಗಂಟೆಯಲ್ಲಿ ರಾಜೀನಾಮೆ ನೀಡಬೇಕಾಗುತ್ತದೆ. ರಮೇಶ್ ಜಾರಕಿಹೊಳಿ ಪ್ರಕರಣದಂತೆಯೇ ಆಗುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ನೀಡಿದರು.
ಮತ್ತೆ ಸಿಎಂ ಬಿಎಸ್ ವೈ ಕುಟುಂಬದ ವಿರುದ್ದ ವಾಗ್ದಾಳಿ ನಡೆಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ದೆಹಲಿಗೆ ಮುಖ್ಯಮಂತ್ರಿಗಳು ಹೋಗಬೇಕಿತ್ತು. ಆದರೆ ಇದು ಬಿಎಸ್ ವೈ ಸರ್ಕಾರವಲ್ಲ. ವಿಜಯೇಂದ್ರ ಸರ್ಕಾರ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಜತೆ ವಿಜಯೇಂದ್ರ ಹೋಗುತ್ತಾರೆ. ಇದು ವಿಜಯೇಂದ್ರ ಸರ್ಕಾರವೆಂದು ಸಾಭೀತಾಗಿದೆ ಎಂದು ಟೀಕಿಸಿದರು.
ಇನ್ನು ಯೋಗೇಶ್ವರ್ ವಜಾ ಮಾಡುವ ಪ್ರಶ್ನೆಯೇ ಇಲ್ಲ. ಯೋಗೇಶ್ವರ್ ರನ್ನ ಡಿಸಿಎಂ ಮಾಡಿ, ಇಂಧನ ಸಚಿವರನ್ನಾಗಿ ಮಾಡಿದ್ರೂ ಆಶ್ಚರ್ಯವಿಲ್ಲ. ಯೋಗೇಶ್ವರ್, ಮುರುಗೇಶ್ ನಿರಾಣಿ ಒಂದೇ ಮಾರ್ಗದ ಮೂಲಕ ಸಚಿವರಾದವರು ಎಂದು ಯತ್ನಾಳ್ ತಿಳಿಸಿದರು.
Key words: Vijayendra- government-CM BS eddyurappa-no power –against- Yogeshwar- Basanagowda Patil Yatnal.