ವಿಜಯಪುರ, ನವಂಬರ್,2,2020(www.justkannada.in): ಭೀಮಾತೀರದಲ್ಲಿ ಮತ್ತೆ ಗುಂಡಿನ ದಾಳಿ ಸದ್ದು ಮಾಡಿದ್ದು ಮೂವರು ಅಪರಿಚಿತ ದುಷ್ಕರ್ಮಿಗಳು ಭೀಮಾತೀರದ ಮಹದೇವ ಭೈರಗೊಂಡ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ವಿಜಯಪುರ ಜಿಲ್ಲೆ ಚಡಚಣ ತಾಲ್ಲೂಕಿನ ಕೆರೂರು ಬಳಿ ಅಪರಿಚಿತ ಮೂವರು ದುಷ್ಕರ್ಮಿಗಳು ಮಹದೇವ ಭೈರಗೊಂಡ ಗುಂಡಿನ ದಾಳಿ ನಡೆಸಿದ್ದಾರೆ. ಮೂರರಿಂದ ನಾಲ್ಕು ಸುತ್ತು ಗುಂಡು ಹಾರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ, ಗುಂಡಿನ ದಾಳಿ ವೇಳೆ ಮಹದೇವ ಭೈರಗೊಂಡ ತೀವ್ರ ಗಾಯಗೊಂಡಿದ್ದು ವಿಜಯಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹದೇವ ಭೈರಗೊಂಡ ಕಾರಿಗೆ ಟಿಪ್ಪರ್ ನಿಂದ ಡಿಕ್ಕಿ ಹೊಡೆಸಿ ನಂತರ ಫೈರಿಂಗ್ ಮಾಡಲಾಗಿದೆ. ಈ ಕುರಿತು ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: vijaypur- bhimathira-mahadeva bairagonda-firing-hospital