ವಿಜಯಪುರ,ಆ,22,2019(www.justkannada.in): ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸಂಸದ ನಳೀನ್ ಕುಮಾರ್ ಕಟೀಲ್ ಅವರನ್ನ ನೇಮಕ ಮಾಡಿರುವ ಕುರಿತು ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡಪಾಟೀಲ್ ಯತ್ನಾಳ್ ಗೆ ಸಚಿವ ಕೆ.ಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನ ಕೇಳಿ ಬಿಜೆಪಿ ರಾಜ್ಯಾಧ್ಯಕ್ಷರನ್ನ ನೇಮಕ ಮಾಡಬೇಕಿತ್ತಾ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಟಾಂಗ್ ಕೊಟ್ಟಿದ್ದಾರೆ.
ನಿನ್ನೆ ಮಾಧ್ಯಮಗಳ ಜತೆ ಮಾತನಾಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಳೀನ್ ಕುಮಾರ್ ಕಟೀಲ್ ಅವರು ಮಂಗಳೂರನ್ನ ಬಿಟ್ಟು ಬಂದೇ ಇಲ್ಲ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಭೇಟಿ ನೀಡಿದ್ದನ್ನು ನಾನು ನೋಡಿಲ್ಲ. ಹೀಗಾಗಿ ರಾಜ್ಯಾಧ್ಯಕ್ಷರಾಗಿ ಎಲ್ಲಾ ಜಿಲ್ಲೆಗಳಿಗೂ ಸುತ್ತಬೇಕು ಎಂದಿದ್ದರು.
ಈ ಕುರಿತು ಇಂದು ವಿಜಯಪುರದಲ್ಲಿ ಪ್ರತಿಕ್ರಿಯಿಸಿದ ಸಚಿವ ಕೆ.ಎಸ್ ಈಶ್ವರಪ್ಪ, ಯತ್ನಾಳ್ ಅವರನ್ನು ಕೇಳಿ ರಾಜ್ಯ ಅಧ್ಯಕ್ಷರನ್ನು ನೇಮಕ ಮಾಡಬೇಕಿತ್ತಾ. ರಾಜ್ಯದ ಬಿಜೆಪಿಯನ್ನ ನಳೀನ್ ಕುಮಾರ್ ಕಟೀಲ್ ನಡೆಸುತ್ತಾರೆ. ಅವರಿಗೆ ಎಲ್ಲಾ ಭಾಘದ ಕಾರ್ಯಕರ್ತರು ಸಾಥ್ ನೀಡಲಿದ್ದಾರೆ ಎಂದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇನು ಇಡೀ ದೇಶ ಸುತ್ತಿದ್ದಾರೆಯೇ? ಅವರು ದೇಶದ ಎಲ್ಲಾ ಜನರಿಗೂ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಜಾರಕಿಹೊಳಿ ಕುಟುಂಬದಿಂದ ಸರ್ಕಾರಕ್ಕೆ ಧಕ್ಕೆಯಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ. ನಮಗೆ ಶೀಘ್ರವೇ ಸಚಿವ ಸ್ಥಾನ ಸಿಗಲಿದೆ. ಹೀಗಾಗಿ ನಾವು ಯಾರು ಸರ್ಕಾರಕ್ಕೆ ಧಕ್ಕೆ ಮಾಡಲ್ಲ ಎಂದು ಬಾಲಚಂದ್ರ ಜಾರಕಿಹೊಳಿ ಅವರೇ ಹೇಳಿದ್ದಾರೆ. ಹಾಗಾಗಿ ಉಮೇಶ್ ಕತ್ತಿ ಸೇರಿದಂತೆ ಯಾರೂ ಕೂಡ ಸರ್ಕಾರ ಕೆಡವಲು ಪ್ರಯತ್ನಿಸುವುದಿಲ್ಲ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
Key words: vijaypur-ks eshwarappa-mla- basanagowda patil yatnal-naleen kumar katil