ಹಳ್ಳಿ‌ಮಕ್ಕಳಿಗೆ ವಿಜ್ಞಾನದ ಅರಿವು ಅಗತ್ಯ: ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್.

ಮೈಸೂರು,ಸೆಪ್ಟಂಬರ್,9,2021(www.justkannada.in):  ಮೈಸೂರು ವಿವಿಯ ವಿಜ್ಞಾನ ಶಿಕ್ಷಣ ಕೇಂದ್ರ ಮೂಲಕ ಹಳ್ಳಿ‌ಮಕ್ಕಳಿಗೆ ವಿಜ್ಞಾನದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಮೈಸೂರು ವಿವಿ‌ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯ ವತಿಯಿಂದ ಶಾಲೆಗಳಲ್ಲಿ ವಿಜ್ಞಾನ ಶಿಕ್ಷಣ ಕೇಂದ್ರ (CSES) ಸಹಯೋಗದೊಂದಿಗೆ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ನಡೆದ“ಕೇಂದ್ರದ ಜಾಲತಾಣ ಉದ್ಘಾಟನಾ ಸಮಾರಂಭ”ವನ್ನು ಕುಲಪತಿ ಪ್ರೊ. ಜಿ.ಹೇಮಂತ ಕುಮಾರ್ ನೆರವೇರಿಸಿದರು.

ಇದು ವಿಜ್ಞಾನ ಶಿಕ್ಷಣ ಕೇಂದ್ರ ಜೌಟ್ ರೀಚ್ ಪ್ರೋಗ್ರಾಮ್. 2006 ಇದರ ಸ್ಥಾಪನೆ ಆಯಿತು. ಇದರ ಮೂಲಕ ನಮ್ಮ ವಿವಿ ಸ್ನಾತಕೋತ್ತರ ಅಧ್ಯಾಪಕರು ಶಾಲೆಗಳಿಗೆ ಹೋಗಿ ವಿಜ್ಞಾನ ಅರಿವು ಮೂಡಿಸುತ್ತಿದ್ದಾರೆ. ಮೈವಿವಿಯ ನಾಲ್ಕು ಜಿಲ್ಲೆಗಳಲ್ಲೂ ಈ ಕಾರ್ಯಕ್ರಮ ನಡೆಯುತ್ತಿದೆ ಎಂದರು.

2017 ರಲ್ಲಿ ಮೊಬೈಲ್ ಸೈನ್ಸ್ ಲ್ಯಾಬ್ ಬಂತು. ವಿಜ್ಞಾನಕ್ಕೆ ಬೇಕಾದ ಪ್ರಯೋಗ, ಸಂಶೋಧನೆಯನ್ನು ಈ ಮೊಬೈಲ್ ಬಸ್ ಮಕ್ಕಳಿಗೆ ತೋರಿಸುತ್ತದೆ. ಪ್ರತಿ ಶನಿವಾರ ಹಳ್ಳಿ ಶಾಲೆಗಳಿಗೆ ಈ ವ್ಯಾನ್ ಬಸ್ ಹೋಗುತ್ತದೆ. ಹಿರಿಯ ವಿಜ್ಞಾನಿಗಳು, ಬಾಲ ವಿಜ್ಞಾನ ಹಿರಿಯರು ಇದರಲ್ಲಿ ಇರುತ್ತಾರೆ.‌ ವಿಜ್ಞಾನ ಓದಲು ಮಕ್ಕಳಿಗೆ ಆಸಕ್ತಿ ಬರುವಂತೆ ಮಾಡುವುದು ಇದರ ಉದ್ದೇಶ. ಸದ್ಯ ಮೈಸೂರು ವಿವಿ 10 ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದು ಅಲ್ಲೂ ಮೊಬೈಲ್ ಸಂಚಾರಿ ಬಸ್ ಹೋಗಲಿದೆ ಎಂದರು.

ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ ಮಾತನಾಡಿ, ವಿಜ್ಞಾನ ಕಲಿಕೆ ಬಗ್ಗೆ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಕುತೂಹಲ ಮತ್ತು ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ  ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನಾಭಿವೃದ್ಧಿ ಸಮಿತಿ (ಸಿಡಿಎಸ್‌ಎಸ್) ಗಣಿತ ಹಾಗೂ ವಿಜ್ಞಾನ ಕಾರ್ಯಕ್ರಮಗಳ ಮೇಲೆ ಬೆಳಕು ಚೆಲ್ಲುವ ಉದ್ದೇಶದಿಂದ ಸಂಚಾರಿ ಪ್ರಯೋಗಾಲಯದ ಮೂಲಕ ಮೈಸೂರು ಶಾಲೆಗಳ ವ್ಯಾಪ್ತಿಯಲ್ಲಿ ವಿಜ್ಞಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು.

ಭೌತಶಾಸ್ತ್ರ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ, ಗಣಿತ ಹಾಗೂ ಪ್ರಾಣಿ ಶಾಸ್ತ್ರಗಳಲ್ಲಿ ಬೆಳಕಿನ ಮಹತ್ವ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳಿಂದ ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸಗಳನ್ನು ನೀಡಲಾಗುತ್ತಿತ್ತು. ಕೋವಿಡ್ ಕಾರಣದಿಂದ ಸ್ಥಗಿತಗೊಂಡಿತು. ಅದಕ್ಕೆ ಈಗ ಆನ್‌ ಲೈನ್ ಸ್ವರೂಪವನ್ನು ನೀಡಲಾಗಿದ್ದು, ಪ್ರಶ್ನೋತ್ತರಗಳ ರೂಪದಲ್ಲಿ ಮಾಹಿತಿ ಇರಲಿದೆ. ಈ ವೆಬ್ಸೈಟ್ ನಲ್ಲಿ ಈ ಯೋಜನೆ‌ ಸಮಗ್ರ ವಿವರ ಮತ್ತು ವಿಡಿಯೋ ಇರಲಿದೆ ಎಂದರು.

ಡಾ.ಎಂ.ಎಸ್.ಚಂದ್ರಶೇಖರ್, ಪ್ರೊ.ಕೆ.ಎ.ರವೀಶ, ಪ್ರೊ.ಕೆ.ಎಸ್.ಮಲ್ಲೇಶ್, ಪ್ರೊ.ಜಿ.ಆರ್.ಜನಾರ್ದನ್, ಪ್ರೊ.ಭಾಗ್ಯಲಕ್ಷ್ಮೀ, ಹರಿಪ್ರಸಾದ್, ಪ್ರೊ.ಆರ್.ರಂಗರಾಜನ್, ಡಾ.ಆಶಾ ಅಯ್ಯಂಗಾರ್, ಪ್ರೊ.ಬಿ.ಜೆ.ಜಗದೀಶ ಸದಸ್ಯರಾಗಿದ್ದರು.  ಪ್ರೊ.ಮಾಲಿನಿ, ಎಚ್.ಶ್ರೀನಿವಾಸ್, ಎಸ್.ರವಿಕುಮಾರ್, ಕೆ.ಸೋಮಶೇಖರ್ ಇತರರು ಉಪಸ್ಥಿತರಿದ್ದರು.

ENGLISH SUMMARY…

Rural students require more awareness on science: UoM VC
Mysuru, September 9, 2021 (www.justkannada.in): Vice-Chancellor of the University of Mysore Prof. G. Hemanth Kumar has informed that the University will make efforts to create more awareness among the rural students about science subjects through the University Science Education Center.
He inaugurated the Union Internet program, held at the Vignana Bhavana, in Manasagangotri today, organized by the University of Mysore, in association with the CSES. He informed that it is an outreach program of the Science Education Centre and it was established in the year 2006. “The Post Graduation Department professors of our University will go to the schools and create awareness on science. This program is being held in four districts,” he explained.
“The Mobile Science Lab was established in the year 2017. Efforts are made to demonstrate various laboratory experiments to the students through the mobile science lab. The mobile lab visits schools in villages on every Saturday, accompanied by senior scientists and teachers. The purpose of this program is to create interest among the students to learn science. Presently 10 government schools have been adopted. The mobile science lab visits these schools also,” he added.
Dr.M.S. Chandrashekar, Prof. K.A.Raveesh, Prof. K.S. Mallesh, Prof. G.R. Janardhan, Prof. Bhagyalakshmi, Hariprasad, Prof. R. Rangarajan, Dr. Asha Iyengar, Prof. B.J. Jagadish, Prof. Malini, H.Srinivas, S. Ravikumar, K. Somashekar and others were present.
Keywords: University of Mysore/science/ rural students/ awareness/ Mobile science lab

Key words: village -needs – knowledge –science- Mysore university- VC-Prof.G.Hemanth Kumar