ನವದೆಹಲಿ,ಫೆ,27,2020(www.justkannada.in): ದೆಹಲಿಯ ಈಶಾನ್ಯ ಭಾಗದಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರಿಗೆ ಹಾಗೂ ಗಂಭೀರ ಗಾಯಗೊಂಡವರಿಗೆ ದೆಹಲಿ ಸಿಎಂ ಅರವಿಂದ್ ಕೇಂಜ್ರಿವಾಲ್ ಪರಿಹಾರವನ್ನು ಘೋಷಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಹಿಂಸಾಚಾರದಲ್ಲಿ ಮೃತಪಟ್ಟಿರವವರ ಕುಟುಂಬಕ್ಕೆ ತಲಾ 10 ಲಕ್ಷ, ಮನೆ ಕಳೆದುಕೊಂಡವರಿಗೆ 5 ಲಕ್ಷ, ಅಂಗಡಿ ಹಾನಿಗೆ ತಲಾ 5 ಲಕ್ಷ, ಘಟನೆಯಲ್ಲಿ ದಿವ್ಯಾಂಗರಾದವರಿಗೆ ಹಾಗೂ ಗಂಭೀರ ಗಾಯಗೊಂಡವರಿಗೆ 5 ಲಕ್ಷ ಪರಿಹಾರ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ.
ಗಲಭೆಯಿಂದ ಯಾರಿಗೂ ಲಾಭವಾಗುವುದಿಲ್ಲ. ಹಿಂಸಾಚಾರದಿಂದ ಎಲ್ಲರಿಗೂ ನಷ್ಟವಾಗಿದೆ. ಹೀಗಾಗಿ ನಷ್ಟಕ್ಕೆ ಒಳಗಾದವರೊಂದಿಗೆ ಸರ್ಕಾರವಿದೆ ಎಂದು ಹೇಳಿದರು. ಹಾಗೆಯೇ ಗಲಭೆ ಪ್ರಚೋದಿಸುವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಿ. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಿ. ರಾಜಕೀಯ ಬೇಡ. ಯಾವುದೇ ಪಕ್ಷದವರಾಗಿರಲಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಿ. ನಮ್ಮ ಪಕ್ಷದವರಾಗಿದ್ದರೆ ಎರಡು ಪಟ್ಟು ಕ್ರಮ ಕೈಗೊಳ್ಳಲಿ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ತಿಳಿಸಿದರು.
Key words: Violence –Delhi- Declaration -relief – families – deceased