ಮೈಸೂರು,ಮಾ,20,2020(www.justkannada.in): ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ ತಟ್ಟಿದ್ದು, ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಬರುವವರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ.
ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಐಪಿ ಹಾಗೂ ವಿಶೇಷ ದರ್ಶನವನ್ನು ರದ್ದು ಮಾಡಲಾಗಿದ್ದು, ದೇಗುಲ ಸಿಬ್ಬಂದಿ ಹತ್ತತ್ತು ಮಂದಿಯನ್ನು ಮಾತ್ರ ದರ್ಶನಕ್ಕೆ ಬಿಡುತ್ತಿದ್ದಾರೆ.
ಕೊರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಸ್ಯಾನಿಟೈಸರ್ ವಿತರಣೆ ಮಾಡಲಾಗುತ್ತಿದೆ. ದರ್ಶನಕ್ಕೆ ಬರುವ ಭಕ್ತರಿಗೆ ದ್ವಾರದ ಬಳಿಯಲ್ಲೇ ಸ್ಯಾನಿಟೈಸರ್ ಸಿಂಪಡಣೆ ಮಾಡಿ ಒಳಗೆ ನಿಡಲಾಗುತ್ತಿದೆ. ಭಕ್ತರು ಹಸ್ತಕ್ಕೆ ಸ್ಯಾನಿಟೈಸರ್ ಪಡೆದು ದರ್ಶನ ಪಡೆಯುತ್ತಿದ್ದಾರೆ.
Key words: VIP- cancellation -Mysore -Chamundeshwari Temple- Sanitizer -spray – devotees.