ಬೆಂಗಳೂರು, ಮೇ 15, 2021 (www.justkannada.in): ಕೋವಿಡ್ ಸಂಕಷ್ಟದಲ್ಲಿರುವವರಿಗಾಗಿ ನೆರವು ಸಂಗ್ರಹಿಸುತ್ತಿರುವ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಇದರಲ್ಲೂ ದಾಖಲೆ ಬರೆದಿದ್ದಾರೆ.
7 ದಿನಗಳಲ್ಲಿ ಸಂಗ್ರಹವಾದ ಹಣವನ್ನು ಆಕ್ಸಿಜನ್ ಸಿಲಿಂಡರ್, ವೈದ್ಯಕೀಯ ಸೌಲಭ್ಯ, ಟೆಲಿ ಮೆಡಿಸಿನ್ ಪೂರೈಸಲು ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ.
ಹೌದು. ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಕೋವಿಡ್ ವಿರುದ್ದದ ಹೋರಾಟಕ್ಕೆ 2 ಕೋಟಿ ರುಪಾಯಿ ದೇಣಿಗೆ ನೀಡಿದ್ದರು. ಜತೆಗೆ ಕೆಟ್ಟೋ ಸಹಭಾಗಿತ್ವದಲ್ಲಿ ಒಂದು ವಾರದ ಅವಧಿಯಲ್ಲಿ ಕನಿಷ್ಠ 7 ಕೋಟಿ ರುಪಾಯಿ ಸಂಗ್ರಹಿಸಿದ್ದಾರೆ.
7 ದಿನಗಳ ಅಂತರದಲ್ಲಿ ವಿರುಷ್ಕಾ ಜೋಡಿ ಬರೋಬ್ಬರಿ 11 ಕೋಟಿ 39 ಲಕ್ಷದ 11 ಸಾವಿರದ 820 ರುಪಾಯಿ(11,39,11,820 ರುಪಾಯಿ) ದೇಣಿಗೆ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ.
ಇದರೊಂದಿಗೆ ಸಮಾಜಮುಖಿ ಕಾರ್ಯಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ವಿರುಷ್ಕಾ ದಂಪತಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.