ಮೈಸೂರು,ಫೆಬ್ರವರಿ,25,2021(www.justkannada.in): ಮಾರ್ಚ್ 15ರಿಂದ 8 ದಿನಗಳ ಕಾಲ ವರ್ಚುವಲ್ ಉದ್ಯೋಗ ಮೇಳವನ್ನ ಜಾಬ್ ಕಾರ್ಟ್ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ವತಿಯಿಂದ ಆಯೋಜನೆ ಮಾಡಲಾಗಿದೆ ಎಂದು ಕರಾಮುವಿ ಕುಲಪತಿ ಪ್ರೊ. ವಿದ್ಯಾಶಂಕರ್ ತಿಳಿಸಿದರು.
ಕೆಎಸ್ ಒಯು ಆಡಳಿತ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಉದ್ಯೋಗ ಮೇಳದ ಬಗ್ಗೆ ಮಾಹಿತಿ ನೀಡಿದ ಕರಾಮುವಿ ಕುಲಪತಿ ಪ್ರೊ. ವಿದ್ಯಾಶಂಕರ್, ಅವಕಾಶ ವಂಚಿತರಿಗೆ, ಮಹಿಳೆಯರಿಗೆ ಹಾಗೂ ಗ್ರಾಮೀಣ ಭಾಗದ ಜನರಿಗೆ ಪದವಿ ನೀಡುವುದರ ಜೊತೆಗೆ ಉದ್ಯೋಗ ನೀಡುವ ಧ್ಯೇಯೋದ್ದೇಶ ಹೊಂದಿರುವ ಹಿನ್ನೆಲೆ, ಕೆ ಎಸ್ ಒ ಯುವಿನಿಂದ ವರ್ಚುವಲ್ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ. ಮಾರ್ಚ್ 15ರಿಂದ 23ರವರೆಗೆ 8 ದಿನಗಳ ಕಾಲ ಉದ್ಯೋಗ ಮೇಳ ನಡೆಯಲಿದ್ದು, ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ ನಾರಾಯಣ್ ರಿಂದ ವರ್ಚುವಲ್ ಉದ್ಯೋಗ ಮೇಳವನ್ನ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು.
ರಾಜ್ಯದ ಹೆಸರಾಂತ 100ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗಿಯಾಗಲಿವೆ, ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ, ಐಟಿಐ, ಡಿಪ್ಲೊಮಾ, ಬಿಇ ಹಾಗೂ ಯಾವುದೇ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದ್ದು ಸುಮಾರು 6700ಕ್ಕೂ ಹೆಚ್ಚು ಉದ್ಯೋಗಾಂಕ್ಷಿಗಳು ಭಾಗಿಯಾಗುವ ನಿರೀಕ್ಷೆ ಇದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುವ JobKart App (ಜಾಬ್ ಕಾರ್ಟ್) ಆ್ಯಪ್ ನ ಮೂಲಕ ನೋಂದಣಿಗೆ ಅವಕಾಶವಿದೆ ಎಂದು ಪ್ರೊ. ವಿದ್ಯಾಶಂಕರ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಪ್ರೊ. ಲಿಂಗರಾಜ ಗಾಂಧಿ, ಜಾಬ್ ಕಾರ್ಟ್ ಸಂಸ್ಥಾಪಕ ಹಾಗೂ ಸಿಇಒ ವೆಂಕಟೇಶ್ ಎಸ್.ವಿ, ಉದ್ಯೋಗಾಧಿಕಾರಿ ಡಾ.ಆರ್.ಹೆಚ್.ಪವಿತ್ರ ಉಪಸ್ಥಿತರಿದ್ದರು.
ENGLISH SUMMARY….
8-days ‘Virtual Job Mela’ by KSOU from Mar. 15 in Mysuru
Mysuru, Feb. 25, 2021 (www.justkannada.in): The Karnataka State Open University has organized an eight days ‘Virtual Job Mela’ in Mysuru commencing from March 15, 2021.
Prof. Vidyashankar, Vice-Chancellor, KSOU, today addressed a press meet held in Mysuru. He informed that the job mela has been organized with a view of providing job opportunities for the opportunity deprived, women, and rural youth. This virtual job mela will be from March 15 to 23 and Dr. Ashwathnarayan, Deputy Chief Minister and Higher Education Minister will inaugurate the mela.
More than 100 companies are taking part in this mela. Candidates who have passed SSLC, PUC, Degree, ITI, Diploma, BE and any other degree and postgraduates can participate in the job mela. About 6700 job aspirants are expected to take part in the virtual job mela. Registration can be made by downloading JobKart App through Google Playstore, he informed.
Prof. Lingaraja Gandhi, Registrar, Venkatesh S.V., Founder of Job Kart, and CEO, Dr. R.H. Pavitra, Employment Officer were present at the press meet.
Keywords: Virtual Job mela/ March 15-23/ KSOU/ eight-days job mela
Key words: Virtual job fair- KSOU – march-15- 8 days-mysore