ವಿಶಾಖಪಟ್ಟಣಂ, 07, ಮೇ 2020 (www.justkannada.in): ಬೆಳಗ್ಗೆ ವಿಶಾಖಪಟ್ಟಣಂ ಜಿಲ್ಲೆಯ ಆರ್. ಆರ್. ವೆಂಕಟಪುರಂನ ಕೆಮಿಕಲ್ ಕಾರ್ಖಾನೆಯಲ್ಲಿ ಸ್ಟೈರೀನ್ ಗ್ಯಾಸ್ ಲೀಕ್ ಆಗಿದೆ. ಇದರಿಂದಾಗಿಯೇ ಜನರಿಗೆ ಕಣ್ಣು, ಚರ್ಮ ಮತ್ತು ಮೂಗಿನಲ್ಲಿ ಉರಿ ಅನುಭವ ಕಾಣಿಸಿಕೊಂಡಿದ್ದು, ಉಸಿರಾಟದ ತೊಂದರೆಯು ಎದುರಾಗಿದೆ.
ಸ್ಟೈರಿನ್ ಗ್ಯಾಸ್ ಒಂದು ಬಣ್ಣರಹಿತ ಸುಡುವ ದ್ರವವಾಗಿದ್ದು, ಇದು ಸುಲಭವಾಗಿ ಆವಿಯಾಗುತ್ತದೆ. ಇದನ್ನು ಪಾಲಿಸ್ಟೈರೀನ್ ಪ್ಲ್ಯಾಸ್ಟಿಕ್, ರಾಳ (ರೆಸಿನ್ಸ್), ಫೈಬರ್ಗ್ಲಾಸ್, ರಬ್ಬರ್ ಮತ್ತು ಲ್ಯಾಟೆಕ್ಸ್ ತಯಾರಿಕೆಯಲ್ಲಿ ಬಳಸುತ್ತಾರೆ.
ಸ್ಟೈರೀನ್ ಹೊಂದಿರುವ ಗ್ರಾಹಕ ಉತ್ಪನ್ನಗಳು
ಪ್ಯಾಕೇಜಿಂಗ್ ಮೆಟಿರೀಯಲ್ಸ್, ವಿದ್ಯುತ್ ಬಳಕೆಗಾಗಿ ಇರುವ ಇನ್ಸುಲೇಶನ್, ಮನೆ ಮತ್ತು ಇತರೆ ಕಟ್ಟಡಗಳ ಬಳಕೆಗಾಗಿ ಇರುವ ಇನ್ಸುಲೇಶನ್, ಫೈಬರ್, ಪ್ಲ್ಯಾಸ್ಟಿಕ್ ಪೈಪ್ಸ್, ಆಟೋಮೊಬೈಲ್ ಬಿಡಿ ಭಾಗಗಳು, ಡ್ರಿಂಕಿಂಗ್ ಕಪ್ಸ್ ಹಾಗೂ ಇತರೆ ಆಹಾರ ಪದಾರ್ಥ ಬಳಸುವ ಸಾಮಾಗ್ರಿಗಳಲ್ಲಿ ಸ್ಟೈರಿನ್ ಇರುತ್ತದೆ.
ಸೋರಿಕೆಯಾದ ಸ್ಟೈರೀನ್ ಗ್ಯಾಸ್ ಮಾನವನನ್ನು ಸ್ಪರ್ಶಿಸಿದರೆ, ಉಸಿರಾಟದ ತೊಂದರೆ ಎದುರಾಗುತ್ತದೆ. ಕಣ್ಣು, ಮೂಗು ಹಾಗೂ ಚರ್ಮದಲ್ಲಿ ಉರಿ ಮತ್ತು ಜಠರಗರುಳಿನ ಸಮಸ್ಯೆ ಉಂಟಾಗುತ್ತದೆ