ಬೆಂಗಳೂರು,ಜು,8,2020(www.justkannada.in): ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಇಂದು ಶಿವಾಜಿ ನಗರದಲ್ಲಿರುವ ಬ್ರಾಡ್ವೇ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದರು.
ಬಿಬಿಎಂಪಿಗೆ ಸೇರಿದ ಈ ಆಸ್ಪತ್ರೆಗೆ ಹೆಸರಾಂತ ಸಾಫ್ಟ್‌ವೇರ್ ಸಂಸ್ಥೆ ಇನ್ಫೋಸಿಸ್ ಅಗತ್ಯವಿರುವ ಎಲ್ಲಾ ಮೂಲ ಸೌಲಭ್ಯಗಳನ್ನು ಒದಗಿಸಿಕೊಡುತ್ತಿದೆ. ಇದನ್ನು ಪೂರ್ಣ ಪ್ರಮಾಣದಲ್ಲಿ ಕೋವಿಡ್ ಆಸ್ಪತ್ರೆಯ ಅಗಿ ಸಜ್ಜುಗೊಳಿಸಲಾಗುತ್ತಿದೆ. ಈ ಹಿನ್ನೆಲೆ ಇಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಶಾಸಕ ರಿಜ್ವಾನ್ ಹರ್ಷದ್ ಮತ್ತು ಹಿರಿಯ ಅಧಿಕಾರಿಗಳು ಹಾಜರಿದ್ದರು.
ನಗರದಲ್ಲಿ ಅತಿ ಹೆಚ್ಚು ಸಾವುಗಳು ಈ ಆಸ್ಪತ್ರೆಯಲ್ಲಿ ಆಗಿರುವ ಹಿನ್ನೆಲೆಯಲ್ಲಿ ವೈದ್ಯಾಧಿಕರಿಗಳ ಜತೆ ಸಾವಿನ ಮೌಲ್ಯಮಾಪನ ವರದಿ ಸಲ್ಲಿಸುವಂತೆ ಸಚಿವ ಸುಧಾಕರ್ (ಡೆತ್ ಆಡಿಟ್) ಸೂಚನೆ ನೀಡಿದರು. ಬಳಿಕ ಬಿಎಂಸಿಯಿಂದ ಹಸ್ತಾಂತರ ಮಾಡುವ ಸಿಬ್ಬಂದಿ ವಿವರ, ರೋಗಿಗಳಿಗೆ ನೀಡುತ್ತಿರುವ ಊಟದ ವಿವರ ಪಡೆದ ಸಚಿವ ಸುಧಾಕರ್, ಐಸಿಯು ಮತ್ತು ವಾರ್ಡುಗಳಲ್ಲಿರುವ ರೋಗಿಗಳ ಜತೆ ವಿಡಿಯೋ ಸಂವಾದ ನಡೆಸಿ ಚಿಕಿತ್ಸೆ ಮತ್ತು ಸೌಲಭ್ಯಗಳ ಮಾಹಿತಿ ಪಡೆದರು.
ಈ ಸಮಯದಲ್ಲಿ ಎಲ್ಲಾ ರೋಗಿಗಳು ಊಟ, ಚಿಕಿತ್ಸೆ ಮತ್ತು ಸೌಲಭ್ಯಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದು, ಸದ್ಯ ಇರುವ ರೋಗಿಗಳ ಸಂಖ್ಯೆ, ನೀಡುತ್ತಿರುವ ಚಿಕಿತ್ಸೆ ಹೂಗೂ ಇತರೆ ಸೌಲಭ್ಯಗಳ ಬಗ್ಗೆ ಸಚಿವ ಡಾ.ಕೆ ಸುಧಾಕರ್ ಮಾಹಿತಿ ಕಲೆ ಹಾಕಿದರು.
ಇನ್ನು ಸಿಬ್ಬಂದಿ ಅಗತ್ಯತೆ, ಗುತ್ತಿಗೆ ಆಧಾರದಲ್ಲಿ ಇರುವ ಸಿಬ್ಬಂದಿ ವಿವರ ಪಡೆದ ಸೃಜನೆ ಆಗಿ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕ ಮಾಡಿಕೊಳ್ಳಲು ಸೂಚನೆ ನೀಡಿದರು. ಹಾಗೆಯೇ ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಸುಧಾಕರ್ ಕೋವಿಡ್ ರೋಗಿಗಳ ಚಿಕಿತ್ಸೆ ಮತ್ತು ಸೌಲಭ್ಯಗಳನ್ನು ಪರಿವೀಕ್ಷಣೆ ನಡೆಸಿದ್ದಾರೆ
Key words: Visit- hospital-Minister –Sudhakar-video conference- patients