ಮೈಸೂರು,ಸೆಪ್ಟಂಬರ್,15,2021(www.justkannada.in): ಮೈಸೂರು ವಿಶ್ವವಿದ್ಯಾನಿಲಯಕ್ಕೆ ರಾಷ್ಟ್ರೀಯ ವೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿ (ನ್ಯಾಷನಲ್ ಅಸೆಸ್ಮೆಂಟ್ ಆ್ಯಂಡ್ ಅಕ್ರೆಡೆಸನ್ ಕೌನ್ಸಿಲ್-ನ್ಯಾಕ್) ಇಂದು (ಸೆ.15) ರಂದು ಭೇಟಿ ನೀಡುತ್ತಿದ್ದು, ಎರಡು ದಿನ ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ಪರಿಶೀಲಿಸಲಿದ್ದಾರೆ.
ಪ್ರತಿ ಐದು ವರ್ಷಕ್ಕೊಮ್ಮೆ ನ್ಯಾಕ್ ವಿವಿಗಳಿಗೆ ಭೇಟಿ ನೀಡುವುದು ವಾಡಿಕೆ. 2014ರಿಂದ 2019ರವರೆಗೆ ನೀಡಿದ ಡೇಟಾವನ್ನೇ ನ್ಯಾಕ್ ಕಮಿಟಿ ಪರಿಗಣಿಸಲಿದೆ. 700 ಅಂಕಕ್ಕೆ ಈಗಾಗಲೇ ವರದಿ ಕಳುಹಿಸಲಾಗಿದೆ. ನ್ಯಾಕ್ ಕಮಿಟಿ ಉಳಿದ 300 ಅಂಕವನ್ನು ನೀಡುತ್ತದೆ. ಒಂದೂವರೆ ತಿಂಗಳಿನಿಂದ ಇದಕ್ಕಾಗಿ ಸಿದ್ಧತೆ ನಡೆಯುತ್ತಿದೆ. ಮೊದಲಿಗೆ ಮೂಲ ಸೌಕರ್ಯವನ್ನು ನೋಡುತ್ತಾರೆ. 10 ವಿಭಾಗವನ್ನು ಅವರೇ ಆಯ್ಕೆ ಮಾಡಿಕೊಂಡು ಭೇಟಿ ನೀಡುತ್ತಾರೆ.
ಸಂಶೋಧನಾ ಸೌಲಭ್ಯ, ಕ್ರೀಡಾಂಗಣ, ಆ್ಯಂಪಿ ಥಿಯೇಟರ್ ಎಲ್ಲವನ್ನೂ ವೀಕ್ಷಣೆ ಮಾಡಲಿದ್ದಾರೆ. 7 ಜನರು ಒಂದೊಂದು ತಂಡವಾಗಿ ಬೇರೆ ಬೇರೆ ಕಡೆ ಭೇಟಿ ನೀಡಲಿದ್ದಾರೆ. ಅಧ್ಯಾಪಕರು, ಹಳೆಯ ವಿದ್ಯಾರ್ಥಿಗಳು, ಪೋಷಕರೊಂದಿಗೂ ಮಾತುಕತೆ ನಡೆಸುತ್ತಾರೆ. ಈ ಬಾರಿ ಗ್ರೇಡ್ ವಿಧಾನ ಬದಲಾಗಿದೆ. ಎ ಪ್ಲಸ್ ಪ್ಲಸ್ ಅತ್ಯುನ್ನತ ದರ್ಜೆ. ನಂತರದ್ದು ಎ ಪ್ಲಸ್, ಎ, ಬಿ ಮುಂತಾದ ಗ್ರೇಡ್ ಗಳಿದೆ. ಹಾಗಾಗಿ ಎ ಪ್ಲಸ್ ಪ್ಲಸ್ ಗ್ರೇಡ್ ಪಡೆಯುವುದು ನಮ್ಮ ಗುರಿ ಎಂದು ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.
Key words: Visit – NAAC-Committee- today -Mysore university
ENGLISH SUMMARY….
NAAC Committee visit to UoM today
Mysuru, September 15, 2021 (www.justkannada.in): The National Assessment and Accreditation Council (NAAC) team will visit the University of Mysore today. The team will assess all the educational activities conducted by the University of Mysore during the two-day visit.
The NAAC Committee visits the Universities once in five years. This year the 2014 to 2019 data will be considered according to the grade. The University of Mysore has already sent a report to accord 700 points, and the NAAC will provide 300 additional points. The University is making the required preparations for three months. The NAAC team will first check the infrastructure.
The team will also visit the Research facility, stadium, and amphi-theater. A team of 7 members each will check the various divisions and interact with the lecturers, old students, and parents as well. This time the NAAC grading pattern has changed. Accordingly, ‘A++’ will be the top grade, followed by ‘A+’, ‘A’, ‘B’, and so on. The University of Mysore aims to secure an ‘A++’ grade.
Keywords: University of Mysore/ NAAC/ team/ visit/ assessment