ಮೈಸೂರು,ಜೂನ್,28,2023(www.justkannada.in): ದೇಶದ ಸ್ವಚ್ಛ ನಗರಿ ಇಂದೋರ್ ಗೆ ಭೇಟಿ ನೀಡಿ ಅನೇಕ ವ್ಯವಸ್ಥೆಗಳನ್ನ ವೀಕ್ಷಣೆ ಮಾಡಿದೆವು. ಅಲ್ಲಿನ ಮಾದರಿ ಯೋಜನೆಗಳನ್ನ ಮೈಸೂರಿಗೆ ಜಾರಿ ಮಾಡಲು ಚಿಂತನೆ ಮಾಡಲಾಗುತ್ತದೆ ಎಂದು ಮೈಸೂರು ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್ ತಿಳಿಸಿದರು.
ಪಾಲಿಕೆಯಿಂದ ಅಧ್ಯಯನ ದೃಷ್ಟಿಯಿಂದ ಪ್ರವಾಸ ಕೈಗೊಂಡಿದ್ದ ಹಿನ್ನೆಲೆ, ಮೇಯರ್ ಶಿವಕುಮಾರ್ ಹಾಗೂ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಯಿತು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೇಯರ್ ಶಿವಕುಮಾರ್, ಪಾಲಿಕೆಯಿಂದ ಕೈಗೊಂಡಿದ್ದ ಅಧ್ಯಯನ ಪ್ರವಾಸದಿಂದ ಕೆಲ ವ್ಯವಸ್ಥೆಗಳನ್ನ ಕಲಿತಿದ್ದೇವೆ. ದೇಶದ ಸ್ವಚ್ಛ ನಗರಿ ಇಂದೋರ್ ಗೆ ಭೇಟಿ ನೀಡಿ ಅನೇಕ ವ್ಯವಸ್ಥೆಗಳನ್ನ ವೀಕ್ಷಣೆ ಮಾಡಿದೆವು. ನಮ್ಮಲ್ಲಿ ಜಿಪಿಎಸ್ ಅಳವಡಿಸಿದ್ದೇವೆ ಆದರೆ ಪರಿಪೂರ್ಣ ಕಾರ್ಯರೂಪಕ್ಕೆ ತರಬೇಕು. ಬಯೋ ಗ್ಯಾಸ್ ಉತ್ಪಾದನೆ ಬಗ್ಗೆ ವೀಕ್ಷಣೆ ಮಾಡಿದ್ದೇವೆ. ಸಿಎನ್ ಜಿ ಗ್ಯಾಸ್ ಚಾಲಿತ ಬಸ್ ಗಳು ಇಂದೋರ್ ನಲ್ಲಿ ಅಳವಡಿಸಿದ್ದಾರೆ. ಪರಿಸರಕ್ಕೆ ಅನುಕೂಲವಾಗುವ ದೃಷ್ಟಿ ಹಲವು ಯೋಜನೆ ಜಾರಿಗೆ ತಂದಿದ್ದಾರೆ. ಪ್ಲಾಸ್ಟಿಕ್ ಬ್ಯಾನ್ ಕಟ್ಟುನಿಟ್ಟಾಗಿ ನಿಭಾಯಿಸಿದ್ದಾರೆ. ಕಾಮಗಾರಿಗಳಿಂದ ಬರುವ ಕಸವನ್ನು ಬೇರೆ ವಸ್ತುಗಳ ಬಳಕೆಗೆ ವ್ಯವಸ್ಥೆಗಳನ್ನ ಮಾಡಿಕೊಂಡಿದ್ದಾರೆ. ಈ ರೀತಿಯ ಮಾದರಿ ಯೋಜನೆಗಳ ಜಾರಿಗೆ ತರಲು ನಾವು ಮುಂದಾಗಬೇಕಿದೆ ಎಂದರು.
ಮೈಸೂರು ನಗರವನ್ನು ನಂ.1 ಸ್ವಚ್ಛ ನಗರವನ್ನಾಗಿಸಲು ಹಲವು ವ್ಯವಸ್ಥೆಗಳನ್ನ ತರಬೇಕಿದೆ. ಕಡ್ಡಾಯವಾಗಿ ಡ್ರೈ ವೇಸ್ಟ್ ಬೆರ್ಪಡಿಸುವ ವ್ಯವಸ್ಥೆ ಇದೆ. ಕಸದಿಂದ ಪುನರ್ಬಳಕೆಯಿಂದ ಹಲವು ವಸ್ತುಗಳ ತಯಾರಿಸುತ್ತಾರೆ. ಕಸದಿಂದಲೂ ಹಣ ಗಳಿಸುವ ವ್ಯವಸ್ಥೆ ಇದೆ. ಕೆಲ ಉತ್ತಮ ಯೋಜನೆಗಳನ್ನು ನಮ್ಮ ಪಾಲಿಕೆಯಲ್ಲೂ ಜಾರಿಗೆ ತರಲು ಸದಸ್ಯರೊಂದಿಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಮೇಯರ್ ಶಿವಕುಮಾರ್ ಹೇಳಿದರು.
ಪ್ರವಾಸದಲ್ಲಿ ಯಾಕೆ ಅಧಿಕಾರಿಗಳನ್ನ ಬಿಟ್ಟು ಹೋಗಿದ್ರಿ.? ಕಾಂಗ್ರೆಸ್ ಸದಸ್ಯರಿಂದ ಆಕ್ರೋಶ.
ಅಧ್ಯಯನ ಪ್ರವಾಸ ಕೈಗೊಂಡಿದ್ದ ಮೇಯರ್ ವಿರುದ್ಧ ಸುದ್ದಿಗೋಷ್ಟಿಯ ಮುನ್ನ ಕಾಂಗ್ರೆಸ್ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಅಧ್ಯಯನ ಪ್ರವಾಸದಲ್ಲಿ ಅಧಿಕಾರಿಗಳನ್ನ ಬಿಟ್ಟು ಹೋಗೋದ್ದರ ಬಗ್ಗೆ ಕಾಂಗ್ರೆಸ್ ಸದಸ್ಯರ ಆಕ್ರೋಶ ವ್ಯಕ್ತಪಡಿಸಿದರು.
ಪ್ರವಾಸದಲ್ಲಿ ಯಾಕೆ ಅಧಿಕಾರಿಗಳನ್ನ ಬಿಟ್ಟು ಹೋಗಿದ್ರಿ.? ಕೇವಲ ಸದಸ್ಯರುಗಳು ಮಾತ್ರ ಹೋಗಿದ್ರಿ ಯಾಕೆ ಎಂದು ಕಾಂಗ್ರೆಸ್ ಸದಸ್ಯ ಅಯೂಬ್ ಖಾನ್ ಪ್ರಶ್ನಿಸಿದರು. ಸುದ್ದಿಗೋಷ್ಠಿ ನಡೆಸುವ ಮುನ್ನ ಪ್ರಶ್ನೆಗೆ ಉತ್ತರ ನೀಡಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಎಂದು ಒತ್ತಾಯ ಮಾಡಿದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ಧಿಗೋಷ್ಠಿ ಬಳಿಕ ಮಾತನಾಡೋಣ ಎಂದು ಪಾಲಿಕೆ ಆಯುಕ್ತ ಶಿವಕುಮಾರ್ ಹೇಳಿದರು.
Key words: Visit – Swachh Nagar- Indore- model- project -Mysore – Mayor -Shivakumar