ಬಾಯ್ತಪ್ಪಿ ಆಡಿದ ಮಾತಿಗೆ F.I.R ಯಾಕೆ..? ಸರಕಾರದ ವಿರುದ್ಧವಿಶ್ವನಾಥ್‌ ಕಿಡಿ.

Why an FIR against vokkaliga seer Vishwanath lashes out at the government.

 

ಮೈಸೂರು, ಡಿ.೦೧.೨೦೨೪: (www.justkannada.in news) ಮುಸ್ಲೀಮರಿಗೆ ಮತದಾನದ ಹಕ್ಕು ನೀಡಬಾರದು ಎಂದು ಹೇಳಿಕೆ ನೀಡಿ ಈ ಬಗ್ಗೆ ಕ್ಷಮೆಯಾಚಿಸಿದ ಚಂದ್ರಶೇಖರ ಸ್ವಾಮೀಜಿ ವಿರುದ್ಧ ಎಫ್.ಐ.ಆರ್‌ ದಾಖಲಿಸಿರುವ ಕ್ರಮವನ್ನು ವಿಧಾನ ಪರಿಷತ್‌ ಸದಸ್ಯ ಎಚ್.ವಿಶ್ವನಾಥ್‌ ಖಂಡಿಸಿದ್ದಾರೆ.

ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದಿಷ್ಟು..

ಚಂದ್ರಶೇಖರ್ ಸ್ವಾಮಿ ಎಫ್ ಐ ಆರ್ ಹಾಕಿದ ವಿಚಾರವನ್ನು ತೀವ್ರವಾಗಿ ಖಂಡಿಸುತ್ತೇನೆ. ಬಾಯಿತಪ್ಪಿನಿಂದ ಮಾತನಾಡಿದ್ದೇನೆ ಎಂದು ಸ್ವಾಮೀಜಿ ಪತ್ರ ಬರೆದಿದ್ದಾರೆ. ಕ್ಷಮೆಯನ್ನು ಸಹ ಕೇಳಿದ್ದಾರೆ. ಆದ್ರು ಎಫ್‌ ಐ ಆರ್ ಹಾಕಲಾಗಿದೆ ಇದು ಸಹಿಸಲಾಗದು.

ಸಿದ್ದರಾಮಯ್ಯ ಎಷ್ಟೋ ಭಾಷಣದಲ್ಲಿ ಬಾಯಿತಪ್ಪಿ ಕಾಂಗ್ರೆಸ್ ವಿರುದ್ಧ ಮಾತನಾಡಿದ್ದಾರೆ. ಕಾಂಗ್ರೆಸ್ ನ್ನು ಮುಗಿಸುವುದೆ ನನ್ನ ಗುರಿ ಅಂತ ಮಾತನಾಡಿದ್ದಾರೆ‌. ಕಾಂಗ್ರೆಸ್ ನವರು ನಿಮ್ಮನ್ನ ಹೊರ ಹಾಕಿದ್ರ. ಬಾಯಿತಪ್ಪಿ ಹಾಡಿದ ಮಾತಿಗೆ  ಎಫ್ ಐ ಆರ್ ಹಾಕಿದ್ದಾರೆ. ಇದನ್ನು ವಾಪಸ್ಸು ತೆಗೆದುಕೊಳ್ಳಬೇಕು.

ಮುಡಾ ಕಮಿಷನರ್ ಮತ್ತು ಅಧ್ಯಕ್ಷರ ವಿರುದ್ಧ ದೂರು ದಾಖಲಿಸಿ:

ಮುಡಾ ಆಸ್ತಿಗೆ ಮಾಲೀಕ ಅಂದ್ರೆ ಮುಡಾ ಅಧ್ಯಕ್ಷ ಮುಡಾ ಮತ್ತು ಕಮಿಷನರ್. ಇದೀಗಾ ಜಿಲ್ಲಾಧಿಕಾರಿಯೆ ಅಧ್ಯಕ್ಷರಾಗಿದ್ದಾರೆ. ಅಧ್ಯಕ್ಷರಾದ ಮೇಲೆ ಯಾಕಾಗಿ ಕಂಪ್ಲೆಂಟ್ ಮಾಡಿಲ್ಲ. ಐಎಎಸ್ ಮಾಡಿದವರು ಬುದ್ದಿವಂತ ದೈರ್ಯವಂತರು. ಆದ್ರು ದೂರು ಕೊಡುವ ಕೆಲಸ ಮಾಡ್ತಿಲ್ಲ. ಈ ಬಗ್ಗೆ ಸಭೆಯಲ್ಲಿ ಕೇಳಿದ್ರೆ ದೂರು ಕೊಡುತ್ತೇವೆ ಅಂತ ಹೇಳ್ತಾರೆ. ನಂತರ ಲೀಗಲ್ ಅಡ್ವೈಸ್  ಕೇಳ್ತೇವೆ ಅಂತ ಹೇಳುತ್ತಾರೆ. ಈಗಾಗಲೇ ಹಿಂದಿನ ಮುಡಾ ಕಮಿಷನರ್ ಮತ್ತು ಅಧ್ಯಕ್ಷರ ವಿರುದ್ಧ ದೂರು ದಾಖಲಿಸಬೇಕು.

ಮುಡಾದಲ್ಲಿ 50-50 ಹಂಚಿಕೆಯಾದ ನಿವೇಶನ ಸಂಖ್ಯೆ ಎಷ್ಟು ಎಂಬುದು ಲೆಕ್ಕ ಸಿಕ್ಕಿಲ್ಲ‌. ಮುಡಾದ ಬಗ್ಗೆ ಈಗಲೇ ಕ್ರಮ ತೆಗೆದುಕೊಳ್ಳದಿದ್ದರೆ ಬಹಳ ಜನರ ಪ್ರಾಣಕ್ಕೆ ಹಾನಿಯಾಗುತ್ತೆ. ಸೈಟ್ ಗಳನ್ನ ಮಾರಿದ್ದಾರೆ. ಕೊಂಡುಕೊಂಡವರ ಕಥೆ ಏನಾಗಬೇಕು. ಮೈಸೂರು ಮುಡಾ ಕಳ್ಳತನವಾಗಿದೆ ಆದ್ರು ಸಿಎಂ ಉಸಿರು ಎತ್ತುತ್ತಿಲ್ಲ. 140 ಫೈಲ್ಸ್‌  ತೆಗೆದುಕೊಂಡು ಹೋಗಿದ್ದಾರೆ ಎಂದು ಲೋಕಯುಕ್ತದ ಟಿಪ್ಪಣಿಯಲ್ಲಿ ಇದೆ. ಅದು ಯಾರ ಸೈಟ್,ಯಾವ ಪಾರ್ಟಿ ಅವರದು ಎಷ್ಟು ಎಲ್ಲವನ್ನು ತಿಳಿಸಿ. ಸರ್ಕಾರಿ ಪೈಲ್ ಗಳನ್ನ ರದ್ದಿ ಅಂದುಕೊಂಡಿದ್ದಾರ. ಎಲ್ಲಾ ಪೈಲ್ ಗಳನ್ನ ಬೈರತಿ ಹೊತ್ತುಕೊಂಡು ಹೋಗಿದ್ದಾನೆ. ಯಾಕೆ ಪೊಲೀಸ್ ಕಂಪ್ಲೆಂಟ್ ಕೊಟ್ಟಿಲ್ಲ. ಮುಡಾವೇ ದೂರ ಕೊಟ್ಟಿಲ್ಲ ಇದರಿಂದ ಕೇಸ್ ಕ್ಲೋಸ್ ಮಾಡುವ ಪ್ಲಾನ್ ಇದೆ. ಈ ವಿಚಾರವಾಗಿ ಯಾಕೆ ಮುಡಾ ಮೌನವಾಗಿರುವುದು. ಈ ವಿಚಾರವಾಗಿ ಸಿದ್ದರಾಮಯ್ಯ ಮಾದರಿಯಾಗಬೇಕಿತ್ತು. ಇದರಿಂದ ಸಿದ್ದರಾಮಯ್ಯ ಯಾರಿಗೆ ಮಾದರಿಯಾದ್ರು. ವಿಧಾನಪರಿಷತ್ ಸದಸ್ಯ ವಿಶ್ವನಾಥ್ ಹೇಳಿಕೆ.

ಸ್ವಾಭಿಮಾನ ಸಮಾವೇಶ :

ಈ ಸ್ವಾಭಿಮಾನಿ ಸಮಾವೇಶ ಯಾರಿಗೋಸ್ಕರ ಮಾಡ್ತ ಇದಿರಾ. ಸಂಕಟ ಬಂದಾಗ ವೆಂಕಟರಮಣ ಅಂತಾರೆ. ಇದೀಗಾ ಸಿದ್ದರಾಮಯ್ಯಗೆ ಸಂಕಟ ಬಂದಿದೆ. ಈಗ ಸಿದ್ದರಾಮಯ್ಯಗೆ ಅಹಿಂದ ನೆನಪಾಗಿದೆ. ಸ್ವಾರ್ಥಕ್ಕೆ ಅಹಿಂದ ಬಳಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ದಲಿತರಿಗೆ, ಅಲ್ಪಸಂಖ್ಯಾತರಿಗೆ, ಕುರುಬರಿಗೆ ಏನು ಮಾಡಿದ್ರು. ಯಾವ ಸ್ವಾಭಿಮಾನ, ಯಾರಿಗಾಗಿ ಸಮಾವೇಶ್ ಮಾಡ್ತಾ ಇದಿರಾ. 5 ನೇ ತಾರೀಖು ಸ್ಪಷ್ಟೀಕರಣ ಕೊಡಬೇಕು. ಈ ಸಮಾವೇಶಕ್ಕೆ ಯಾಕಾಗಿ, ಇಡೀ ಸರ್ಕಾರವೆ ಇದರಲ್ಲಿ ಆಡಳಿತವೆ ಭಾಗಿಯಾಗುತ್ತೆ. ಮೈಸೂರಿನಲ್ಲಿ ವಿಧಾನಪರಿಷತ್ ಸದಸ್ಯ ವಿಶ್ವನಾಥ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ

key words: Why an FIR, against vokkaliga seer, Vishwanath, lashes out at, the government.