ಬೆಂಗಳೂರು,ಜನವರಿ,8,2022(www.justkannada.in): ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕೆಲಸ ಮಾಡದೇ ಈಗ ವೋಟ್ ಬ್ಯಾಂಕ್ ಗಾಗಿ ಪಾದಯಾತ್ರೆ ಹೋರಾಟ ಮಾಡುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಟೀಕಿಸಿದ್ದಾರೆ.
ಇಂದು ಮಾಧ್ಯಮಗಳ ಜತೆ ಮಾತನಾಢಿದ ಸಚಿವ ಗೋವಿಂದ ಕಾರಜೋಳ, ಕಾಂಗ್ರೆಸ್ ಪಾದಯಾತ್ರೆಗೆ ನಮ್ಮ ವಿರೋಧವಿಲ್ಲ. ಪ್ರತಿಯೋಬ್ಬರಿಗ ಹೋರಾಟ ಮಾಡೋ ಹಕ್ಕಿದೆ. ಆದರೆ ಕೊರೋನಾ ಹೆಚ್ಚುತ್ತಿರುವ ವೇಳೆ ಸಾವಿರಾರು ಜನ ಸೇರಿಸಿ ಹೋರಾಟ ಎಷ್ಟು ಸರಿ..? ಸಮಯ ನೋಡಿ ಹೋರಾಟ ಮಾಡಬೇಕಾಗುತ್ತದೆ. 25 ಸಾವಿರ ಜನರನ್ನ ಸೇರಿಸಿ ಹೋರಾಟ ಮಾಡಿದ್ತೀವಿ ಅಂದ್ರೆ ಹೇಗೆ..? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾವುದೇ ಕೆಲಸ ಮಾಡಲಿಲ್ಲ ನೀರಾವರಿ ಯೋಜನೆಗಳ ಬಗ್ಗೆ ಯಾವುದೇ ಕೆಲಸ ಮಾಡಲಿಲ್ಲ. ಈಗ ವೋಟ್ ಬ್ಯಾಂಕ್ ಗಾಗಿ ಹೋರಾಟ ಮಾಡುತ್ತಿದೆ. ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಹೋರಾಟ ಮಾಡುವುದು ಎಷ್ಟು ಸರಿ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಪ್ರತಿಭಾರಿ ಅಣ್ಣಾಮಲೈ ಹೆಸರು ಹೇಳುತ್ತಾರೆ. ಅಣ್ಣಾಮಲೈ ಚುನಾಯಿತ ಪ್ರತಿನಿಧಿ ಅಲ್ಲ. ಅವರು ರಾಜ್ಯಾಧ್ಯಕ್ಷ ಅಷ್ಟೇ .ಸರ್ಕಾರದ ಭಾಗಿ ಅಲ್ಲ ಎಂದು ಗೋವಿಂದ ಕಾರಜೋಳ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.
Key words: Vote Bank – congress-Minister -Govinda Karajola