ಮೋದಿ ರಾಕ್ಷಸ ಪ್ರವೃತ್ತಿಯ ಪ್ರಧಾನಿ: ಕಾಂಗ್ರೆಸ್ ಪಕ್ಷದ ಪರ ಮತ ನೀಡಿ- ಮುಖ್ಯಮಂತ್ರಿ ಚಂದ್ರು ಮನವಿ.

ಮೈಸೂರು,ಏಪ್ರಿಲ್,24,2024 (www.justkannada.in): ಮೋದಿ ರಾಕ್ಷಸ ಪ್ರವೃತ್ತಿಯ ಪ್ರಧಾನಿ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರ ಮತ ನೀಡಿ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷರಾದ ನಟ ಮುಖ್ಯಮಂತ್ರಿ ಚಂದ್ರು ಮನವಿ ಮಾಡಿದರು.

ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ನಾವು 2024 ರ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟಕ್ಕೆ ನಮ್ಮ ಬೆಂಬಲವನ್ನ ಸೂಚಿಸಿದ್ದೇವೆ. ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿರುವ ಬಿಜೆಪಿಯನ್ನ ಈ ಬಾರಿ ಜನ ಸೋಲಿಸಬೇಕು, ಸಂವಿಧಾನ ಉಳಿವಿಗಾಗಿ ಬಿಜೆಪಿಗೆ ಮತ ಹಾಕಬಾರದು. ಪ್ರಜಾಪ್ರಭುತ್ವವನ್ನು  ಉಳಿಸುವುದಕ್ಕಾಗಿ ಆರ್ ಎಸ್ ಎಸ್ ಹಿಡಿತದಲ್ಲಿ ಇರುವ ಬಿಜೆಪಿ ಸೋಲಿಸಬೇಕು. ಮಹಿಳಾ ದೌರ್ಜನ್ಯ ತಡೆಯಲು,ಚುನಾವಣಾ ಬಾಂಡ್ ಭ್ರಷ್ಟಾಚಾರ ತಡೆಯಲು, ಕೋಮುವಾದಿ ಕಾರ್ಪೊರೇಟ್  ಸರಕಾರ ಅಳಿಸಬೇಕು ಎಂದು ಕರೆ ನೀಡಿದರು.

ಇಂದು ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. 400 ರೂ. ಇದ್ದ ಸಿಲೆಂಡರ್ ಇಂದು 900 ರೂ.  ಆಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಜಾಸ್ತಿ ಆಗಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ರು ಮಾಡಲಿಲ್ಲ, ಅಧಿಕಾರ ಸಿಕ್ಕ ಮೇಲೆ ಎಷ್ಟು ಕಪ್ಪು ಹಣ ವಾಪಸ್ ತಂದಿದ್ದಾರೆ. ಜನರಿಗೆ ಮೋಸ ಮಾಡಿದ್ದಾರೆ. ಸಬ್ ಕಾ ವಿಕಾಸ್ ಅಂದು ಅಂಬಾನಿ ಅದಾನಿಯವರನ್ನು ವಿಕಾಸ ಮಾಡಿ ಜನರನ್ನು ವಿನಾಶ ಮಾಡುತ್ತಿದ್ದಾರೆ. ದೇಶದ ಸಂಪತ್ತನ್ನು ಶ್ರೀಮಂತರ ಪಾಲು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಚಂದ್ರು ವಾಗ್ದಾಳಿ ನಡೆಸಿದರು.

46 ಜನ ಸಿ ಆರ್ ಪಿ ಎಫ್ ಯೋಧರು ಸಾವನ್ನಪ್ಪಿದರು. ಆದರೆ ಮೃತದೇಹದ ಮೇಲೆ  ಇವರೇ ಚುನಾವಣೆ ಮಾಡುತ್ತಾರೆ ಕಣ್ಣೆದುರೇ ಯೋಧರನ್ನು ಕೊಂದ ಸರ್ಕಾರ. ಗುತ್ತಿಗೆ ಆಧಾರದ ಮೇಲೆ ಸೈನ್ಯಕ್ಕೆ ಸೇರಿದ್ರೆ ಹೇಗೆ ಆಮೇಲೆ ಅವರು ಕಳ್ಳತನ ಮಾಡಬೇಕು ಅಷ್ಟೇ. ಸಾರ್ವಜನಿಕ ವಲಯವನ್ನ  ಬೇರೆಯರಿಗೆ ಮಾಡುತ್ತಿದ್ದಾರೆ,  ಬಿಜೆಪಿ ಸರಕಾರ ಬಂದ ಮೇಲೆ ಬಿಲ್ಕಿಸ್ ಬಾನು ಅಪರಾಧಿಗಳಿಗೆ ಕ್ಷಮಾಧಾನ ಮಾಡಿದ್ದಾರೆ. ಪತ್ರಕರ್ತರ ಮೇಲೆ ಯುಎಪಿಎ ಕೇಸ್ ಹಾಕಿದ್ದಾರೆ.  ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಚಂದ್ರು ಆರೋಪಿಸಿದರು.

ರೈತರ ಆದಾಯ ದ್ವಿಗುಣ ಮಾಡುತ್ತೇವೆ ಅಂದ್ರು. ಆದರೆ ಸಾಲದ ಶೂಲಕ್ಕೆ ಸಿಲುಕಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದಲಿತರ ಬದುಕು ಪ್ರಾಣಿಗಳಿಗಿಂತ ಕಡೆಯಾಗಿದೆ. ಚುನಾವಣಾ ಬಾಂಡುಗಳ ಮುಖಾಂತರ ಭ್ರಷ್ಟಾಚಾರ ಮಾಡಿದ್ದಾರೆ. ಐಟಿ, ಇಡಿಯನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾರೆ. ಬಿಜೆಪಿ ಸಂಸದರಿಗೆ ಧ್ವನಿಯೇ ಇಲ್ಲದಂತಾಗಿದೆ. ಮೋದಿ ರಾಕ್ಷಸ ಪ್ರವೃತ್ತಿಯ ಪ್ರಧಾನಿ ಎಂದು ಕಿಡಿಕಾರಿದರು.

ಬಿಜೆಪಿ ಅಭ್ಯರ್ಥಿಯಾದ ಮೈಸೂರಿನ ಮಹಾರಾಜರಿಗೆ ಅನುಭವ ಇದೆಯಾ.? * ಮಹಾರಾಜರಿಗೆ ಇವರಿಗೆ ಯಾಕೆ ಬೇಕು ಗುಮಾಸ್ತನ ಕೆಲಸ. ನನಗೆ ಅನಿಸಿದ ಮಟ್ಟಿಗೆ ಅವರು ಆಸೆಯಿಂದ ಬಂದಿಲ್ಲ. ಯಾರೋ ತಳ್ಳಿರಬಹುದು. ರಾಜಸ್ಥಾನದಲ್ಲಿ ಮಾವನ ಆಸ್ತಿ ಲೂಟಿ ಆಗಿದೆ. ನಂದು ಸ್ವಲ್ಪ ಉಳಿಸಿಕೊಳ್ಳೋಣ ಆಂತ ಬಂದಿರಬಹುದು. ನಾನು ಟೀಕೆ ಮಾಡುತ್ತಿಲ್ಲ. ನಾಲ್ವಡಿ ಅವರಿಗೆ ಮರ್ಯಾದೆ ಕೊಡುತ್ತೇನೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ರವರು ಜೋಡತ್ತು ಆಗಿ ಕೆಲಸ ಮಾಡುತ್ತಿದ್ದಾರೆ ಆದರೆ ಮೋದಿ ಮತ್ತು ಅಮಿತ್ ಶಾ ಇಬ್ಬರು ಜೋಡತ್ತುಗಳಾಗಿ ದೇಶವನ್ನ ವಿನಾಶ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಚಂದ್ರು ಹರಿಹಾಯ್ದರು.

ಪತ್ರಿಕಾಗೋಷ್ಟಿಯಲ್ಲಿ ಕಾಂಗ್ರೆಸ್ ನಗರ ಅಧ್ಯಕ್ಷರಾದ ಆರ್ ಮೂರ್ತಿ ಆಮ್ ಆದ್ಮಿ ಪಕ್ಷದ ಇತರರಾದ ಸೋಸಲೆ ಸಿದ್ದರಾಜು, ರಂಗಯ್ಯ, ಮಾಲಾವಿಕ ಗುಬ್ಬಿವಾಣಿ, ಮೊಯೀನುದ್ದಿನ್ ಹಾಜರಿದ್ದರು.

Key words: Vote, Congress, mukyamantri Chandru