ಹುಬ್ಬಳ್ಳಿ,ಸೆಪ್ಟಂಬರ್,3,2021(www.justkannada.in): ಹುಬ್ಬಳ್ಳಿ-ಧಾರವಾಡ, ಕಲ್ಬುರ್ಗಿ ಮತ್ತು ಬೆಳಗಾವಿ ಇಂದು ನಗರ ಪಾಲಿಕೆ ಚುನಾವಣೆ ನಡೆಯುತ್ತಿದ್ದು ಮತದಾನ ಪ್ರತಿಕ್ರಿಯೆ ಆರಂಭವಾಗಿದೆ. ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, ಸೆಪ್ಟೆಂಬರ್ 6 ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ಈ ನಡುವೆ ಹುಬ್ಬಳ್ಳಿಯಲ್ಲಿ ಬಿಜೆಪಿ ಮತ್ತು ಕೆಆರ್ ಎಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ವಾರ್ಡ್ ನಂ,52ರಲ್ಲಿ ಮತದಾನ ವಿಚಾರಕ್ಕೆ ಗೊಂದಲ ಉಂಟಾಗಿದ್ದು , ಪೊಲೀಸರು ಬಿಜೆಪಿಗೆ ಬೆಂಬಲಿಸಿದ್ದಾರೆ ಎಂದು ಕೆಆರ್ ಎಸ್ ಪಕ್ಷದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾದರು. ಇದೇ ವಿಚಾರಕ್ಕೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ಜತೆ ಕೆಆರ್ ಎಸ್ ಪಕ್ಷದ ಕಾರ್ಯಕರ್ತರು ಮಾತಿನ ಚಕಮಕಿ ನಡೆಸಿದರು.
ಹುಬ್ಬಳ್ಳಿ ಧಾರವಾಡ ಪಾಲಿಕೆಯ ವಾರ್ಡ್ ಸಂಖ್ಯೆ 28ರಲ್ಲಿ ವಿವಿ ಪ್ಯಾಟ್ ಇಲ್ಲದ ಹಿನ್ನೆಲೆ 5 ಮತಕೇಂದ್ರಗಳಲ್ಲಿ ಮತದಾನ ಸ್ಥಗಿತಗೊಳಿಸಲಾಗಿದೆ. ಇನ್ನು ಬೆಳಗಾವಿಯಲ್ಲಿ ಬೆಳಿಗ್ಗೆ 9 ಗಂಟೆ ವೇಳೆಗೆ ಶೇ. 5.39 ರಷ್ಟು ಮತದಾನವಾಗಿದೆ. ಬೆಳಗಾವಿಯಲ್ಲಿ 58 ವಾರ್ಡ್ ಗಳಿದ್ದು ಮ್ಯಾಜಿಕ್ ನಂ. 33 ಆಗಿದೆ ಕಲ್ಬುರ್ಗಿ ಪಾಲಿಕೆಯಲ್ಲಿ 55 ವಾರ್ಡ್ ಗಳಿದ್ದು 31 ಮ್ಯಾಜಿಕ್ ನಂ.ಆಗಿದೆ ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ 82 ವಾರ್ಡ್ ಗಳಿದ್ದು 45 ಮ್ಯಾಜಿಕ್ ನಂ.ಆಗಿದೆ.
ENGLISH SUMMARY…
Voting for three City Corporations begin: Argument between KRS and BJP activists
Hubballi, September 3, 2021 (www.justkannada.in): Elections for the Hubballi-Dharwad, Kalaburagi, and Belagavi City Corporations are held today. The voting has commenced and will be held till 6.00 pm. Results will be announced on September 6.
In Hubballi there was an argument between the BJP and KRS activists. Confusion prevailed at Ward No. 52 over the voting process. KRS activists alleged that the police are supporting BJP and demonstrated expressing their ire. As a result of this, an argument took place between the police, BJP activists, and the KRS party activists.
Voting was stopped at 5 voting booths in Hubballi-Dharwad Corporation limits Ward No. 28 due to the absence of VV Pat. In Belagavi 5.39% voting was registered at 9.00 am. There are a totally 58 wards in Belagavi and the magic number is 33. In Kalaburagi there are 55 wards and the magic number here is 31 and in Hubballi-Dharwad there are 82 wards and the magic number is 45.
Keywords: Hubballi-Dharwad/ Kalaburagi/ Belagavi/ City Corporations/ elections
Key words: Vote – election – three –city corporation-argument –between- KRS- BJP- activists.