ವೋಟ್ ಕಳ್ಳತನ ನೋಟ್ ಪ್ರಿಂಟ್ ನಷ್ಟೇ ಅಪರಾಧ: ಕಿಂಗ್ ಪಿನ್ ಗಳ ವಿರುದ್ದ ಕ್ರಮ ಆಗಬೇಕು-ಡಿ.ಕೆ ಶಿವಕುಮಾರ್ ಆಗ್ರಹ.

ಬೆಂಗಳೂರು,ನವೆಂಬರ್,26,2022(www.justkannada.in): ವೋಟ್ ಕಳ್ಳತನ ನೋಟ್ ಪ್ರಿಂಟ್ ನಷ್ಟೇ ಅಪರಾಧ.  ವೋಟರ್ ಐಡಿ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಆಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ  ಡಿ.ಕೆ ಶಿವಕುಮಾರ್ ಆಗ್ರಹಿಸಿದರು.

ಇಂದು ಈ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್, ಚುನಾವಣಾ ಆಯೋಗವು ನಮ್ಮ ಮನವಿಯನ್ನ ಅಂಗೀಕರಿಸಿದೆ.  ಅದರ ಆಧಾರದ ಮೇಲೆ ಮೂವರು ಅಧಿಕಾರಿಗಳನ್ನ ಅಮಾನತು ಮಾಡಲಾಗಿದೆ. .  ಸಿಎಂ ಸಚಿವರ ಸೂಚನೆಯಂತೆ ಅಧಿಕಾರಿಗಳು ಕೆಲಸ ಮಾಡಿದ್ದಾರೆ.  ವೋಟರ್ ಐಡಿ ಅಕ್ರಮ ಪ್ರಕರಣದಲ್ಲಿ  ಕಿಂಗ್ ಪಿನ್ ಗಳ ವಿರುದ್ದ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.

ಬೆಂಗಳೂರಿನ   28 ಕ್ಷೇಥರಗಳಲ್ಲಿ ಮತದಾರರ ಪಟ್ಟಿ ಮತ್ತೆ ಪರಿಷ್ಕರಣೆ ಆಗಬೇಖು ದುಡ್ಡು ಎಲ್ಲಿಂದ ಯೋಯ್ತು  28 ಕ್ಷೇತ್ರಗಳು ಸೇರಿ ರಾಜ್ಯಾದ್ಯಂತ ಅಕ್ರಮ ನಡೆದಿದೆ. ಚಿಲುಮೆ ಸಂಸ್ಥೆ ನನಗೆ ಗೊತ್ತಿಲ್ಲ ಎಂದರು . ಈಗ ದುರುಪಯೋಗವಾಗಿಲ್ಲ ಎನ್ನುತ್ತಿದ್ದಾರೆ. ಸಿಎಂ ಗಮನಕ್ಕೆ ಬಾರದೇ ಇದು ನಡೆಯಲ್ಲ. ಬಿಎಲ್ ಓಗಳನ್ನ ನೇಮಕ ಮಾಡುವ  ಅಧಿಕಾರ ಯಾರಿಗೂ ಇಲ್ಲ  ಪಕ್ಷದಿಂದ ನೇಮಕ ಮಾಡಿದರೂ ತಹಶೀಲ್ದಾರ್ ಗಳ ಸಹಿ ಆಗಬೇಕು.  ನಮ್ಮ ಅವಧಿಯಲ್ಲಿ ಅಕ್ರಮವಾಗಿದ್ದರೇ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ ಎಂದರು.

Key words:  Vote theft – crime- as- note printing-DK Shivakumar

ENGLISH SUMMARY…

‘Voting list scam, a crime equal to fake currency note printing’: Legal action should be initiated against kingpins of the scam – D.K. Shivakumar demands
Bengaluru, November 26, 2022 (www.justkannada.in): “Stealing of votes is a crime which is equal to that of printing fake currency notes. All those who are behind this scam should be penalised,” observed KPCC President D.K. Shivakumar.
Speaking in Bengaluru today, he said, “The Election Commission of India has accepted our appeal. Accordingly, three officers have been suspended. However, the officials have worked as per the instructions of the Chief Minister and Ministers concerned. Legal action should be initiated against the kingpins in this case,” he demanded.
“The voting list of 28 assembly constituencies in Bengaluru should be revised. Where did the money come from? Where did it go? A massive illegal activity has taken place in all the constituencies. I don’t know ‘Chilume’ organization. Now they are claiming it is not misused. How is it possible to happen without the notice of the Chief Minister of the State. Nobody has the power to appoint BLOs. Even it is appointed by the party, it requires the signatures the Tahasildar. If any illegal activity has taken place during our time, let them take action without any hesitation,” he said.
Keywords: KPCC/ D.K. Shivakumar/ Voting ID list/ crime