ಕೋಲಾರ,ನವೆಂಬರ್,19,2022(www.justkannada.in): ವೋಟರ್ ಐಡಿ ಪರಿಷ್ಕರಣೆ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಚಿಲುಮೆ ಸಂಸ್ಥೆ ಮೇಲೆ ದಾಳಿ ಮಾಡಿದಾಗ ಆ ಮಂತ್ರಿಯ ಖಾಲಿ ಚೆಕ್ ಯಾಕೆ ಸಿಕ್ಕಿತು. ಈ ಮಂತ್ರಿ ಇಟ್ಟುಕೊಂಡು ಯಾವ ತನಿಖೆ ಮಾಡುತ್ತೀರಿ…? ಜನರಲ್ಲಿ ವಿಶ್ವಾಸ ಮೂಡಿಸಬೇಕಾದ್ರೆ ಆ ಸಚಿವರನ್ನ ಮೊದಲು ವಜಾ ಮಾಡಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದರು.
ಕೋಲಾರದಲ್ಲಿ ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಪ್ರಕರಣ ಸಂಬಂಧ ಜೆಡಿಎಸ್ ನಿಂಧ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ. ಬಿಜೆಪಿ ಕುತಂತ್ರ ರಾಜಕಾರಣ ಮಾಡುತ್ತಿದೆ. ಅಧಿಕಾರ ಸಿಕ್ಕಾಗ ಪ್ರಾಮಾಣೀಕವಾಗಿ ಕೆಸಲ ಮಾಡದೇ ಈ ರೀತಿ ಕೃತ್ಯವೆಸಗಿದೆ. ಚಿಲುಮೆ ಸಂಸ್ಥೆ ಮೇಲೆ ದಾಳಿ ಮಾಡಿದಾಗ ಒಬ್ಬ ಸಚಿವರಿಗೆ ಸೇರಿದ ಚೆಕ್ ಲೆಟರ್ ಹೆಡ್ ಸಿಕ್ಕಿದೆ . ಸರ್ಕಾರ ಹಾರಕೆ ಉತ್ತರ ಕೊಡಬಾರದು. ಈ ಮಂತ್ರಿ ಇಟ್ಟುಕೊಂಡು ಯಾವ ತನಿಖೆ ಮಾಡುತ್ತಾರೆ ತನಿಖೇ ಮೇಲೆ ವಿಶ್ವಾಸವಿಲ್ಲ. ಚುನಾವಣಾ ಆಯೋಗ ಸರ್ಕಾರದ ಕೈಗೊಂಬೆಯಾಗಿ ಕೆಲಸ ನಿರ್ವಹಿಸಬಾರದು ಎಂದು ಕಿಡಿಕಾರಿದರು.
ಜೆಡಿಎಸ್ ನಿಂದಲೂ ಆಯೋಗಕ್ಕೆ ದೂರು ನೀಡಿ ಪ್ರತಿಭಟನೆ ಮಾಡುತ್ತೇವೆ . ಸರ್ಕಾರದಿಂದ ನಡೆಯೋ ತನಿಖೆ ಪ್ರಯೋಜನವಿಲ್ಲ. ಕಾಂಗ್ರೆಸ್, ಜೆಡಿಎಸ್ ಬೂತ್ ಗಳಲ್ಲಿ ವೋಟರ್ ಡಿಲಿಟ್ ಆಗಿದೆ. ಬಿಜೆಪಿಯಿಂದ ಕುತಂತ್ರ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದರು.
Key words: voter-ID-Ilegal case- minister – Dismiss-HD Kumaraswamy