ಬೆಂಗಳೂರು,ಮೇ,10,2023(www.justkannada.in): ರಾಜ್ಯ ವಿಧಾನಸಭೆಯ ಚುನಾವಣೆಯ ಮತದಾನದ ಅವಧಿ ಅಂತ್ಯವಾಗಿದ್ದು ಬಹುತೇಕ್ ಶಾಂತಿಯುತವಾಗಿ ವೋಟಿಂಗ್ ನಡೆದಿದೆ.
ರಾಜ್ಯದ 224 ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾನದ ಅವಧಿ ಅಂತ್ಯವಾಗಿದೆ. ಮತಗಟ್ಟೆ ಆವರಣದಲ್ಲಿ ಸರತಿ ಸಾಲಿನಲ್ಲಿ ನಿಂತಿರುವವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಬಹುತೇಕ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಮುಕ್ತಾಯವಾಗಿದೆ. 224 ಕ್ಷೇತ್ರಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆದಿದೆ.
ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದಲ್ಲಿ ಗ್ರಾಮಸ್ಥರು ಮತಯಂತ್ರಗಳನ್ನ ಒಡೆದು ಪುಡಿ ಪುಡಿ ಮಾಡಿರುವ ಘಟನೆ ನಡೆದಿತ್ತು.
ಕಾಯ್ದಿರಿಸಿದ್ದ ವಿಎಂ ವಿವಿ ಪ್ಯಾಟ್ ಮಷೀನ್ ಅನ್ನು ಚುನಾವಣಾಧಿಕಾರಿಗಳು ಕೊಂಡೊಯ್ಯುತ್ತಿದ್ದರು . ಈ ವೇಳೆ ಮತದಾನ ಪ್ರಕ್ರಿಯೆ ಅರ್ಥಕ್ಕೆ ಸ್ಥಗಿತಗೊಳಿಸಿದ್ದಾರೆಂದು ತಪ್ಪಾಗಿ ಭಾವಿಸಿ ಗ್ರಾಮಸ್ಥರು ದಾಳಿ ನಡೆಸಿದ್ದು, ಮತಯಂತ್ರಗಳು ವಿವಿ ಪ್ಯಾಟ್ ಗಳನ್ನ ಪುಡಿಪುಡಿ ಮಾಡಿದ್ದರು.
ಮೈಸೂರು ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರು ಬೂತ್ ಪರಿಶೀಲನೆಗೆ ಆಗಮಿಸಿದ ವೇಳೆ ಅಡ್ಡಿಪಡಿಸಿರುವ ಘಟನೆ ನಡೆದಿತ್ತು. ಹಲವು ಕಡೆಗಳಲ್ಲಿ ಪಕ್ಷಗಳ ಕಾರ್ಯಕರ್ತರ ನಡುವೆ ಸಣ್ಣಪುಟ್ಟ ಗಲಾಟೆ ಹೊರತುಪಡಿಸಿ ಮತದಾನ ಶಾಂತಿಯುತವಾಗಿ ನಡೆದಿದೆ.
Key words: Voting- period –ends-Almost- peaceful -voting.