ಬೆಂಗಳೂರು,ಮೇ,11,2023(www.justkannada.in): ಕರ್ನಾಟಕ ವಿಧಾನಸಭೆ ಚುನಾವಣೆ ಮೇ 10 ರಂದು ಮತದಾನ ನಡೆದಿದ್ದು ಈ ಹಿನ್ನೆಲೆ ರಾಜ್ಯದಲ್ಲಿ ಎರಡು ದಿನಗಳ ಕಾಲ ಮದ್ಯ ಮಾರಾಟ ನಿಷೇಧ ಮಾಡಲಾಗಿತ್ತು. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಸುಮಾರು 150 ಕೋಟಿ ರೂ. ನಷ್ಟವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಚುನಾವಣೆ ಹಿನ್ನೆಲೆ ಎರಡು ದಿನ ರಾಜ್ಯಾದ್ಯಂತ ಬಾರ್ ಹಾಗೂ ವೈನ್ ಶಾಪ್ ಕ್ಲೋಸ್ ಆಗಿತ್ತು. ಪ್ರತಿ ದಿನ 12,500 ಮದ್ಯದ ಅಂಗಡಿಗಳಿಂದ ₹80 ರಿಂದ ₹90 ಕೋಟಿ ರೂ. ಆದಾಯವಾಗುತ್ತಿತ್ತು. ಎರಡು ದಿನ ಅಂಗಡಿ ಬಂದ್ ಮಾಡಿದ್ದರಿಂದ ಕೇವಲ ಸರ್ಕಾರಕ್ಕೆ ಮಾತ್ರವಲ್ಲದೇ ಬಾರ್ ಮಾಲೀಕರಿಗೂ ನಷ್ಟ ಆಗಿದೆ.
ಮೇ 8ರ ಸಂಜೆ 6 ಗಂಟೆಯಿಂದ ಮೇ 11ರ ಬೆಳಗ್ಗೆ 6 ಗಂಟೆಯವರೆಗೂ ಮದ್ಯ ಮಾರಟಕ್ಕೆ ನಿರ್ಬಂಧ ಹೇರಲಾಗಿತ್ತು. ಮೇ 8 , 9 , 10 ರಂದು ಡ್ರೈ ಡೇ ಆಚರಿಸುವಂತೆ ಮದ್ಯ ಮಾರಾಟದ ಅಂಗಡಿ ಮಾಲೀಕರಿಗೆ ಚುನಾವಣಾ ಆಯೋಗ ಸೂಚನೆ ನೀಡಿತ್ತು. ಅಲ್ಲದೇ ಮತ ಎಣಿಕೆಗೂ ಸಮಸ್ಯೆಯಾಗದಂತೆ ಮೇ 13 ರ ಬೆಳಗ್ಗೆ 6 ಗಂಟೆಯಿಂದ ಮೇ.14 ರ ಬೆಳ್ಳಗ್ಗೆ 6 ಗಂಟೆವರೆಗೂ ಮದ್ಯ ನಿರ್ಬಂಧಿಸಲಾಗಿದೆ.
Key words: Voting -Rs 150 crore – loss-banning- sale – liquor