ಏ.12 ರಂದು ಮೈಸೂರಿನಲ್ಲಿ ‘ಆರೋಗ್ಯಕ್ಕಾಗಿ ನಡಿಗೆ’ ಮತ್ತು ಉಚಿತ ಆರೋಗ್ಯ ತಪಾಸಣೆ

ಮೈಸೂರು,ಮಾರ್ಚ್,20,2025 (www.justkannada.in):  ಮೈಸೂರಿನ ಪ್ರತಿಷ್ಠಿತ ‘ಮೈಸೂರ್ ವೆಸ್ಟ್ ಲಯನ್ಸ್ ಕ್ಲಬ್ ಆಫ್ ಮೈಸೂರ್ ವೆಸ್ಟ್’ ಸಂಸ್ಥೆ ವತಿಯಿಂದ ಹಾಗೂ ಮೈಸೂರಿನ ಮಹಾರಾಜ ಶಿಕ್ಷಣ ಸಂಸ್ಥೆ ಮತ್ತು ‘ಡ್ರಿಮ್ ಇಂಕ್’ ಇವರ ಸಹಯೋಗದೊಂದಿಗೆ ಏಪ್ರಿಲ್ 12 ರಂದು ‘ಆರೋಗ್ಯಕ್ಕಾಗಿ ನಡಿಗೆ’ ಮತ್ತು ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದ ಲಯನ್ಸ್ ಕ್ಲಬ್ ಆಫ್ ಮೈಸೂರ್ ವೆಸ್ಟ್’ ಸಂಸ್ಥೆ ಅಧ್ಯಕ್ಷ ಡಾ.ಚೇತನ್,  ಈ ಬಾರಿ  ಏಪ್ರಿಲ್ 12 ರಂದು ಶನಿವಾರದಂದು ಬೆಳಗ್ಗೆ 6ಗಂಟೆಗೆ ‘ಆರೋಗ್ಯಕ್ಕಾಗಿ ನಡಿಗೆ/ಆರೋಗ್ಯಕ್ಕಾಗಿ ಓಟವನ್ನು ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 9 ರಿಂದ ಮಧ್ಯಾಹ್ನ 12.30ರವರೆಗೆ ‘ಉಚಿತ ಆರೋಗ್ಯ ತಪಾಸಣೆ’ ಕಾರ್ಯಕ್ರಮದ ಜೊತೆಗೆ ಸಂಜೆ 6.30ಕ್ಕೆ ಚಂಪಕ ಅಕಾಡಮಿ ವತಿಯಿಂದ ಭರತನಾಟ್ಯ ಕಾರ್ಯಕ್ರಮವಿದೆ. ಅದೇ ದಿನ ಸಂಜೆ 6 ಗಂಟೆಗೆ ಸರಿಯಾಗಿ ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಮೂತ್ರಪಿಂಡ ವೈಫಲ್ಯವಿರುವ ಬಡರೋಗಿಗಳಿಗೆ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ, ಹುತಾತ್ಮ ಸೈನಿಕರ ಮಕ್ಕಳ ವಿದ್ಯಾರ್ಥಿ ವೇತನಕ್ಕಾಗಿ ‘ವಾರ್ಷಿಕ ನಿಧಿ’ ಸಂಗ್ರಹಣೆ ಕಾರ್ಯಕ್ರಮವನ್ನು  ‘ಲಯನ್ಸ್ ವೆಸ್ಟ್ ವೆಲ್ನೆಸ್ ಎಂಬ ಹೆಸರಿನಲ್ಲಿ ಆರೋಗ್ಯ ಮತ್ತು ಸ್ವಾಸ್ಥ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮವೂ ಮಿರಾಕಲ್ ಅಂಡ್ ವೀಲ್ಸ್ ಎಂಬ ದೈಹಿಕ ಅಂಗವಿಕಲರ ತಂಡದೊಂದಿಗೆ ಅದ್ದೂರಿಯಾಗಿ ನಡೆಸಲು ನಿರ್ಧರಿಸಿದ್ದೇವೆ. ಸರ್ವರಿಗೂ ಶಿಕ್ಷಣ, ಆರೋಗ್ಯ ದೊರೆಯಬೇಕೆಂಬ ಸ್ವಾಸ್ಥ ಸಮಾಜದ ಗುರಿಯೊಂದಿಗೆ ಏರ್ಪಡಿಸಿರುವ ಈ ಸೇವಾ ಕಾರ್ಯಕ್ರಮವು ನಮ್ಮ ನಿರೀಕ್ಷಿತ ಮಟ್ಟವನ್ನು ಮೀರಿ ಯಶಸ್ವಿಯಾಗಲು ತಮ್ಮೆಲ್ಲರ ಸಹಕಾರ ಬೇಕೆಂದು ಆಶಿಸುತ್ತೇವೆ. ತಾವೆಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ ಎಂದು ಡಾ.ಚೇತನ್ ತಿಳಿಸಿದರು.

Key words: ‘Walk for Health, free health check-up, Mysore, 12th April