ವಿಜಯಪುರ, ಅಕ್ಟೋಬರ್,29,2024 (www.justkannada.in): ಕಳೆದ ಕೆಲವು ದಿನಗಳಿಂದ ವಿಜಯಪುರ ಜಿಲ್ಲೆಯಲ್ಲಿ ಭಾರಿ ಸುದ್ದಿಯಾಗುತ್ತಿರುವ ವಕ್ಫ್ ಆಸ್ತಿ ನೋಂದಣಿ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಬಿಜೆಪಿ ನಿಯೋಗ ವಿಜಯಪುರಕ್ಕೆ ಭೇಟಿ ನೀಡಿ ರೈತರ ಅಹವಾಲು ಸ್ವೀಕಾರ ಮಾಡಿದೆ.
ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಹೆಸರು ಕಾಣಿಸಿಕೊಂಡಿತ್ತು. ಈ ನಡುವೆ ವಕ್ಫ್ ಬೋರ್ಡ್ ಕಡೆಯಿಂದ ರೈತರಿಗೆ ನೊಟೀಸ್ ಜಾರಿಯಾಗಿದ ಬೆನ್ನಲ್ಲೇ ವಿವಾದ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ಈ ಸಂಬಂಧ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಪರಿಶೀಲನಾ ಸಮಿತಿ ರಚಿಸಿದ್ದು, ಇಂದು ಸಂಸದ ಗೋವಿಂದ ಕಾರಜೋಳ ನೇತೃತ್ವದ ಬಿಜೆಪಿ ತಂಡ ವಿಜಯಪುರಕ್ಕೆ ಭೇಟಿ ನೀಡಿದೆ
ವಿಜಯಪುರ ಜಿಲ್ಲೆಯ ಹೊನವಾಡದಲ್ಲಿ ವಕ್ಫ್ ಕಾಯಿದೆಯಿಂದ ಜನರಿಗೆ, ಅದರಲ್ಲೂ ರೈತರಿಗೆ ತೊಂದರೆ ಆಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಜನರ ಅಹವಾಲು ಆಲಿಸಲು, ಜನರ ಧ್ವನಿ ಎತ್ತಲು ರಾಜ್ಯ ಬಿಜೆಪಿಯು ಶಾಸಕ ಗೋವಿಂದ ಕಾರಜೋಳ ನೇತೃತ್ವದಲ್ಲಿ ‘ಬಿಜೆಪಿ ಪರಿಶೀಲನಾ ತಂಡ ವಿಜಯಪುರಕ್ಕೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿತು
ನಿಯೋಗದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ ಹರೀಶ್ ಪೂಂಜಾ, ಸಂಸದ ರಮೇಶ್ ಜಿಗಜಿಣಗಿ ಸೇರಿ ಹಲವು ಬಿಜೆಪಿ ನಾಯಕರಿದ್ದಾರೆ.
Key words: Waqf, property, dispute, BJP delegation, Vijaypur