ವಾರೆಂಟ್ ಜಾರಿಯಾಗಿದೆ: ಬಿಎಸ್ ವೈ ಬೇಗ ಬಂದರೆ ಒಳ್ಳೆಯದು- ಗೃಹ ಸಚಿವ ಡಾ.ಜಿ.ಪರಮೇಶ್ವರ್.

ಬೆಂಗಳೂರು,ಜೂನ್,14,2024 (www.justkannada.in):  ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಕೋರ್ಟ್ ನಿಂದ ವಾರಂಟ್ ಜಾರಿಯಾಗಿದೆ. ಹೀಗಾಗಿ ಬಿಎಸ್ ವೈ ಬೇಗ ಬಂದರೆ ಒಳ್ಳೆಯದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್,  ಬಿಎಸ್ ವೈ ಬೇಗ ಬರದಿದ್ದರೇ ಬಿಎಸ್ ವೈ ರನ್ನ ಕರೆದುಕೊಂಡು ಬರುತ್ತಾರೆ. ಪ್ರಕರಣ ಸಂಬಂಧ ಬಿಎಸ್ ವೈರಿಂದ ಮಾಹಿತಿ ಪಡೆಯುತ್ತಾರೆ. ನಂತರ ಕಾನೂನು ಪ್ರಕಾರವೇ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.

ಬಿಎಸ್ ವೈ ದೆಹಲಿಯಲ್ಲಿ ಇದ್ದಾರೆ ಅಂತಿದ್ದಾರೆ. ಸೋಮವಾರ ಬರೋದಾಗಿ ಬಿಎಸ್ ವೈ ಹೇಳಿದ್ದಾರೆ.  ಬಿಜೆಪಿಯವರು ಸೇಡಿನ ರಾಜಕಾರಣ ಅಂತಾನೆ ಹೇಳುತ್ತಿದ್ದಾರೆ. ಬಿಜೆಪಿಯವರು ಸುಮ್ಮನೆ ಕಥೆ ಕಟ್ಟುತ್ತಿದ್ದಾರೆ. ಇದರಲ್ಲಿ ರಾಹುಲ್ ಗಾಂಧಿ ಹೇಗೆ ಭಾಗಿ ಆಗುತ್ತಾರೆ ಅಂತಾ ಹೇಳಿ. ರಾಹುಲ್ ಗಾಂಧಿ ಈ ವಿಚಾರದಲ್ಲಿ ಭಾಗಿಯಾಗಿಲ್ಲ ಎಂದು ಪರಮೇಶ್ವರ್ ತಿಳಿಸಿದರು.

Key words: Warrant , BSY, Home Minister, Dr. G. Parameshwar