ಕಬಿನಿ ಜಲಾನಯನ ಪ್ರದೇಶದ ಕೆರೆಗಳ ನೀರು ತುಂಬಿಸುವ ಯೋಜನೆ ಇಂದಿನಿಂದಲೇ ಆರಂಭ- ಸಚಿವ ಎಸ್.ಟಿ ಸೋಮಶೇಖರ್.

ಮೈಸೂರು,ಜುಲೈ,5,2021(www.justkannada.in): ಕಬಿನಿ ಜಲಾನಯನ ಪ್ರದೇಶದ 52 ಕೆರೆಗೆಳು ನೀರು ತುಂಬಿಸುವ ಯೋಜನೆ ಇಂದಿನಿಂದಲೇ ಆರಂಭವಾಗಲಿದೆ  ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.jk

ಈ ಸಂಬಂಧ ಇಂದು ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಇವತ್ತು ಎರಡು ಜಿಲ್ಲೆ ಜನಪ್ರತಿನಿಧಿಗಳು ಅಧಿಕಾರಿಗಳ ಸಭೆ ಮಾಡಲಾಗಿದೆ. ಸುರೇಶ್ ಕುಮಾರ್ ಬಹಳ ಮುತುವರ್ಜಿಯಿಂದ ಸಭೆ ಮಾಡಿದ್ದಾರೆ. ಕಬಿನಿ ಜಲಾನಯನ ಪ್ರದೇಶದ 52 ಕೆರೆಗೆಳು ನೀರು ತುಂಬಿಸುವ ಯೋಜನೆ ಇಂದಿನಿಂದಲೆ ಆರಂಭವಾಗಲಿದೆ. 15 ದಿನ ಒಂದು ಟಿಎಂಸಿಯಂತೆ ನೀರು ಬಿಡಲಾಗುವುದು. ಇವತ್ತಿನಿಂದಲೆ ಆದೇಶ ಮಾಡುತ್ತಿದ್ದೇವೆ. ಕಬಿನಿಯಲ್ಲಿ ಸದ್ಯ 14 ‌.5 ಟಿಎಂಸಿ ನೀರು ಇದೆ. ಶಾಸಕರು ಕೂಡ ಸುಧೀರ್ಘವಾಗಿ ಚರ್ಚೆ ಮಾಡಿ ಸಲಹೆ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಕಬಿನಿ ಮೇಲ್ಸೇತುವೆ ನಿರ್ಮಾಣ ಹಾಗೂ ಉದ್ಯಾನ ನಿರ್ಮಾಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್,  ಈ ಬಗ್ಗೆ ಈಗಾಗಲೆ ಕ್ರಮವಹಿಸಿದ್ದಾರೆ. ಇಬ್ಬರು ಮೂವರು ಗುತ್ತಿಗೆದಾರರು ಈಗ ಮುಂದೆ ಬಂದಿದ್ದಾರೆ. ಈ ವಿಚಾರದಲ್ಲಿ ಶಾಸಕ ಅನೀಲ್ ಚಿಕ್ಕಮಾದು ಕೂಡ ವಿಶೇಷ ಆಸಕ್ತಿ ವಹಿಸಿದ್ದರು. ಕಬಿನಿ ಬ್ರಿಡ್ಜ್ ನಿರ್ಮಾಣ ಮಾಡಲು ಎರಡು ಮೂರು ಬಾರಿ ಟೆಂಡರ್ ಕರೆಯಲಾಗಿತ್ತು. ಅದು ಸಾಧ್ಯವಾಗಿರಲಿಲ್ಲ. ಅನಿಲ್ ಚಿಕ್ಕಮಾದು ಮತ್ತು ನಾವು 15 ದಿನಗಳ ಹಿಂದೆ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೆವು. ಸದ್ಯದಲ್ಲೆ ಇದು ಕಾರ್ಯರೂಪಕ್ಕೆ ಬರಲಿದೆ. ನಾವು ಏನು ಪ್ರಸ್ತಾಪ ಮಾಡ್ತೇವೆ ಅದು 100 ಮಾಡ್ತೇವೆ. ಎರಡು ತಿಂಗಳಲ್ಲಿ ಎಲ್ಲವೂ ಫೈನಲ್ ಆಗಲಿದೆ. ಏನು ಮಾಡ್ತೇವೊ ಅದನ್ನ ಹೇಳ್ತೇವೆ. ಯಾವುದನ್ನ ಮಾಡೋದಲ್ವೊ ಅದನ್ನ ಹೇಳಲ್ಲ ಎಂದು ತಿಳಿಸಿದರು.

ENGLISH SUMMARY…..

Filling of the tanks that come under Kabini watershed limits to begin from today: Minister S.T. Somashekar
Mysuru, July 5, 2021 (www.justkannada.in): Mysuru District Incharge Minister S.T. Somashekar today informed that the work of filling up of the 52 tanks that come under the Kabini watershed limits.
The Minister held a meeting with the officials concerned today. Speaking to the press persons after the meeting he informed that the meeting was held with the representatives of the two districts. “Suresh Kumar has conducted the meeting with a lot of concern. The work of filling up of 52 tanks that come under the Kabini reservoir watershed area limits will begin from today. One tmc water will be released every day for the first 15 days. Orders in this regard will be issued today itself. Presently there is 14.5 tmc water storage in the Kabini reservoir. The MLA also has conducted a detailed meeting and given his suggestions,” he added.
Keywords: Mysuru District Incharge Minister/ S.T. Somashekar/ Kabini reservoir/ Watershed areas/ filling of 52 tanks

Key words:  water -filling – lake- Kabini -starts – today-Minister -ST Somashekhar.