ಚಿಕ್ಕಬಳ್ಳಾಪುರ, ಆಗಸ್ಟ್ 28,2020(www.justkannada.in): ಎತ್ತಿನಹೊಳೆ ಅಥವಾ ಎಚ್ಎನ್ ವ್ಯಾಲಿ ಯೋಜನೆಯಿಂದ ಮಂಚನಬೆಲೆಯ ಎರಡು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರೂಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಡಾ.ಕೆ.ಸುಧಾಕರ್, ಜಿಲ್ಲೆಗೆ ಕುಡಿಯುವ ನೀರೊದಗಿಸುವ ಯೋಜನೆಗೆ ಪ್ರಥಮ ಆದ್ಯತೆ ನೀಡಿದ್ದೇನೆ. ಎಚ್‍ಎನ್ ವ್ಯಾಲಿಯಿಂದ ದಿಬ್ಬೂರು ಪಂಚಾಯಿತಿ ಒಂದರಲ್ಲೇ ಏಳು ಕೆರೆಗಳು ತುಂಬುತ್ತಿವೆ. ಇನ್ನು ಮಂಚನಬೆಲೆಯಲ್ಲೂ ಕೆರೆ ತುಂಬಿಸುವ ಯೋಜನೆ ರೂಪಿಸಲಾಗುವುದು” ಎಂದರು.
“ಜಿಲ್ಲೆಯಲ್ಲಿ 5,000 ಜನರಿಗೆ ವಸತಿ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ. ಇನ್ನು ಒಂದು ವರ್ಷದಲ್ಲಿ ಮನೆಗಳು ನಿರ್ಮಾಣಗೊಳ್ಳಲಿವೆ. ಲಭ್ಯವಿರುವ ಮತ್ತಷ್ಟು ಸರ್ಕಾರಿ ಜಾಗಗಳನ್ನು ವಸತಿ ಯೋಜನೆಗೆ ಗುರುತಿಸಲಾಗುತ್ತಿದೆ” ಎಂದು ತಿಳಿಸಿದರು.
“ಬಾಗೇಪಲ್ಲಿ ಕೈಗಾರಿಕಾ ವಲಯವಾಗಿ ಅಭಿವೃದ್ಧಿಯಾಗಲಿದ್ದು, ಇದಕ್ಕೆ ಪೂರಕವಾಗಿ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಮತ್ತಷ್ಟು ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ದೇಹದಲ್ಲಿ ರಕ್ತನಾಳದಂತೆ ದೇಶದಲ್ಲಿ ರಸ್ತೆ, ಕೃಷಿ, ಶಿಕ್ಷಣ ಮುಖ್ಯ” ಎಂದರು. ಸಂಸದ ಬಿ.ಎನ್.ಬಚ್ಚೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚಿಕ್ಕನರಸಿಂಹಯ್ಯ ಪಾಲ್ಗೊಂಡಿದ್ದರು.
ಅವಕಾಶಗಳು ಕುಟುಂಬಕ್ಕೆ ಸೀಮಿತವಲ್ಲ
ಕಾಂಗ್ರೆಸ್ ಪಕ್ಷದ ಇತ್ತೀಚೆಗಿನ ಬೆಳವಣಿಗೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್ “ನಮ್ಮನ್ನಾಳುತ್ತಿದ್ದ ಬ್ರಿಟಿಷರ ವಿರುದ್ಧ ಸಿಡಿದೆದ್ದು, ಸ್ವಾತಂತ್ರ್ಯ ಹೋರಾಟಗಾರರು ಸಮಾನತೆ ಹಾಗೂ ಪ್ರಜಾಪ್ರಭುತ್ವವನ್ನು ತಂದರು. ಈ ವ್ಯವಸ್ಥೆ ಕುರಿತು ಕೆಲ ರಾಜಕೀಯ ನಾಯಕರಿಗೆ ಬಹಳ ನಿಧಾನವಾಗಿ ಪ್ರಜ್ಞೆ ಬಂದಿದೆ. ಇಂತಹವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು. ಒಂದು ಕುಟುಂಬಕ್ಕೆ ಅಥವಾ ಒಬ್ಬ ವ್ಯಕ್ತಿಗೆ ಅವಕಾಶಗಳು ಸೀಮಿತವಾಗಬಾರದು. ನಾನು ಮೊದಲಿನಿಂದಲೂ ಕುಟುಂಬ ರಾಜಕಾರಣವನ್ನು, ಏಕಚಕ್ರಾಧಿಪತ್ಯವನ್ನು ವಿರೋಧಿಸುತ್ತೇನೆ” ಎಂದರು.
ಎತ್ತಿನಹೊಳೆ ಯೋಜನೆಗೆ ಹೆಚ್ಚು ಅನುದಾನ ಬೇಕಿದ್ದು, ಬಾಂಡ್ ಬಿಡುಗಡೆ ಮಾಡಿ ಅನುದಾನ ಸಂಗ್ರಹಿಸುವಂತೆ ಸಿಎಂಗೆ ಮನವಿ ಮಾಡಲಾಗಿದೆ. ಬೆಂಗಳೂರು ಗಲಭೆ ತನಿಖೆಗೆ ಕ್ಲೇಮ್ ಕಮಿಷನರ್ ಆಗಿ ನಿವೃತ್ತ ನ್ಯಾ.ಎಚ್.ಎಸ್.ಕೆಂಪಣ್ಣ ನೇಮಕಗೊಂಡಿದ್ದು, ಕಿಡಿಗೇಡಿಗಳಿಂದ ಪ್ರತಿ ಪೈಸೆ ವಸೂಲಾಗಲಿದೆ ಎಂದು ಸಚಿವರು ಹೇಳಿದ್ದಾರೆ.
ಜನಧನ ಯೋಜನೆಯಡಿ 6 ವರ್ಷಗಳಲ್ಲಿ 40 ಕೋಟಿ ಖಾತೆಗಳು ತೆರೆಯಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ಕೆ ಸಚಿವರು ಧನ್ಯವಾದ ಸಲ್ಲಿಸಿದ್ದಾರೆ.
15 ಕೋಟಿ ರೂ. ವೆಚ್ಚದಲ್ಲಿ ರಸ್ತೆ…
ಗುಂಡ್ಲಗುರ್ಕಿ ಕ್ರಾಸ್ ನಿಂದ ಆಕತಿಮ್ಮನಹಳ್ಳಿ, ಹೊಸಹಳ್ಳಿ, ಸೊಪ್ಪಹಳ್ಳಿ ಮಾರ್ಗವಾಗಿ ರಾಯಪ್ಪನಹಳ್ಳಿವರೆಗೆ 9.50 ಕಿ.ಮೀ., ಹೊಸೂರಿನಿಂದ ಕಂಡಕನಹಳ್ಳಿ, ಗಿಡ್ನಹಳ್ಳಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ-234 ವರೆಗೆ 5.78 ಕಿ.ಮೀ., ಅಜ್ಜವಾರ, ತಿಪ್ಪಹಳ್ಳಿ ಮಾರ್ಗವಾಗಿ ಜಾತವಾರವರೆಗೆ 6.63 ಕಿ.ಮೀ. ಉದ್ದದ ರಸ್ತೆಗಳನ್ನು ಒಟ್ಟು 15.78 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಈ ಕಾಮಗಾರಿಗಳಿಗೆ ಸಚಿವ ಡಾ.ಕೆ.ಸುಧಾಕರ್ ಗುದ್ದಲಿಪೂಜೆ ನೆರವೇರಿಸಿದರು.
ಜೊತೆಗೆ ಬಾಗೇಪಲ್ಲಿಯಲ್ಲಿ ಲೋಕೋಪಯೋಗಿ ಇಲಾಖೆಯ ನೂತನ ಕಟ್ಟಡವನ್ನು ಉದ್ಘಾಟಿಸಿದರು. ಬಳಿಕ ದಿಬ್ಬೂರು ಕೆರೆಗೆ ಬಾಗಿನ ಸಮರ್ಪಿಸಿದರು.
summary…
Project to rejuvenate Manchanabele lakes soon: District in-charge Minister Dr.K.Sudhakar
Opportunities should not be limited any single family in democratic system; I oppose Dynasty Politics
Chikkaballapura – August 28, 2020: Two lakes of Manchanabele will also be filled with water of either HN valley or Yettinahole project soon, said district in-charge Minister Dr.K.Sudhakar. He was inaugurating various developmental works in the district. Our main objective is to provide clean drinking water to the people of Chikkaballapur, 7 lakes are rejuvenated with water from H.N valley. We will work on rejuvenating lakes in Manchanabele also, said the Minister.
5000 houses are being constructed in the district as a part of housing scheme. Additional plots are also earmarked for the project which will be taken up soon said Dr.Sudhakar. Bagepalli will be developed as an industrial area and necessary infrastructure like road and other developments are already in progress he said. More rural roads will be constructed under Pradhan Mantri Gram Sadak Yojana, he added.
I oppose Dynasty Politics
Responding to a question on recent political developments in Congress, Dr Sudhakar said that freedom fighters have brought us equality and democratic system. Unfortunately some political leaders have been enlightened very late about this system. Everyone should get equal opportunities in a democratic system. It should not be limited to a particular family. I oppose dynasty politics said Dr.Sudhakar.
Roads worth Rs.15 Crore in Chikkaballapur
Construction of rural roads worth Rs 15.78 Crore under PMGSY has been initiated by the Minister on Friday. 9.50 Km road from Gundlagurki Cross to Rayappanahalli via Akatimmanahalli, Hosahalli, Soppahalli, 5.78 km road from Hosuru to NH-234 via Kandakanahalli, Gidnahalli, 6.53 km road from Ajjavara to Jatavara via Tippahalli. Earlier Minister also inaugurated new PWD office building at Bagepalli
Other Points made by the Minister
• A memorandum has been submitted to the Chief Minister requesting release of bonds to collect more funds for Yettinahole project.
• Retd. Justice H.S Kempanna has been appointed as claim commissioner with respect to Bengaluru riots, defaulters will pay for the loss.
• Minister thanked the Prime Minister for opening 40 Crore Jan Dhan account in 6 years.
• Medical Education Department employees welfare association has thanked the Minister for implementing NPS scheme for all permanent staff in the department.
Key words: Water -filling -scheme – Manchanabele lakes- Minister- Dr. K. Sudhakar.