ಬೆಂಗಳೂರು ಜನತೆಗೆ ಮತ್ತೊಂದು ಬೆಲೆ ಏರಿಕೆ ಶಾಕ್: ನೀರಿನ ದರ ಹೆಚ್ಚಳ

ಬೆಂಗಳೂರು, ಏಪ್ರಿಲ್,9,2025 (www.justkannada.in):  ಬೆಂಗಳೂರಿನ ಮತ್ತೊಂದು ಬೆಲೆ ಏರಿಕೆಯ ಶಾಕ್ ತಟ್ಟಿದ್ದು ಬೆಂಗಳೂರು ಜಲ ಮಂಡಳಿ ನೀರಿನ ದರ ಹೆಚ್ಚಳ ಮಾಡಿದೆ.

ಈ ಕುರಿತು ಬೆಂಗಳೂರು ಜಲ ಮಂಡಳಿ (BWSSB) ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್  ಮಾಹಿತಿ ನೀಡಿದ್ದು,  ಗೃಹಬಳಕೆ ನೀರಿನ ದರ ಹೆಚ್ಚಳ ಮಾಡಲಾಗಿದೆ. ​ ಗರಿಷ್ಠ ಲೀಟರ್​ ಗೆ ಒಂದು ಪೈಸೆ ಹೆಚ್ಚಳವಾಗಲಿದೆ ಎಂದು ತಿಳಿಸಿದ್ದಾರೆ.

ನೀರು ಬಳಕೆಯ ಆಧಾರದ ಮೇಲೆ ಸ್ಲ್ಯಾಬ್​​ಗಳನ್ನು ನಿಗದಿಪಡಿಸಲಾಗಿದ್ದು, ಎಷ್ಟು ಬಳಕೆಗೆ ಎಷ್ಟು ದರ ಏರಿಕೆಯಾಲಿದೆ ಎಂಬ ಬಗ್ಗೆ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಗೃಹಬಳಕೆ​ಗೆ ಗರಿಷ್ಠ ಲೀಟರ್ ​ಗೆ ಒಂದು ಪೈಸೆ ಹೆಚ್ಚಳವಾಗಲಿದೆ. 0-8 ಸಾವಿರದೊಳಗೆ ಸ್ಲ್ಯಾಬ್​ಗೆ ಲೀಟರ್ ​ಗೆ 0.15 ಪೈಸೆ ಹೆಚ್ಚಳವಾಗಲಿದೆ. 8-25 ಸಾವಿರದೊಳಗಿನ ಸ್ಲ್ಯಾಬ್​ಗೆ ಲೀಟರ್​ಗೆ 0.40 ಪೈಸೆ ಹೆಚ್ಚಳವಾಗಲಿದೆ.  25 ಸಾವಿರ ಲೀಟರ್​ ಗಿಂತ ಹೆಚ್ಚು ಬಳಕೆ ಮಾಡಿದ್ರೆ 0.80 ಪೈಸೆ ಏರಿಕೆಯಾಗಲಿದೆ.50 ಸಾವಿರದಿಂದ 1 ಲಕ್ಷ ಲೀಟರ್ ನೀರು ಬಳಕೆಗೆ 1 ಪೈಸೆ ಹೆಚ್ಚಳವಾಗಲಿದ್ದು,  ನೀರಿನ ದರ ಏರಿಕೆ ಏಪ್ರಿಲ್​ನಿಂದಲೇ ಅನ್ವಯವಾಗಲಿದೆ.

ಪ್ರತಿ ವರ್ಷ ಏಪ್ರಿಲ್ 1ರಿಂದ ಶೇಕಡಾ 3ರಷ್ಟು ನೀರಿನ ದರ ಹೆಚ್ಚಳವಾಗಲಿದೆ. ಇದೀಗ ಸದ್ಯದ ತೀರ್ಮಾನದಿಂದಾಗಿ ಗೃಹ ಬಳಕೆದಾರರಿಗೆ ತಿಂಗಳಿಗೆ 20-30 ರೂ. ಹೆಚ್ಚುವರಿ ಹೊರೆಯಾಗಬಹುದು. ವಾಣಿಜ್ಯ ಬಳಕೆದಾರರಿಗೆ ಪ್ರತಿ ತಿಂಗಳು 50-60 ರೂ. ಹೊರೆಯಾಗಬಹುದು ಎಂದು ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ.

Key words: Bengaluru, people, Water price, hike