ರಾಯಚೂರು,ಅ,23,2019(www.justkannada.in): ತುಂಗಭದ್ರಾ, ಕೃಷ್ಣಾ ನದಿಯಿಂದ ನೀರು ಹೊರ ಬಿಡಲಾದ ಹಿನ್ನೆಲೆ ಜಿಲ್ಲೆಯಲ್ಲಿ ಪ್ರವಾಹದ ಭೀತಿ ಎದುರಾಗಿದ್ದು, ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ನದಿ ಪಾತ್ರದ ಜನರಿಗೆ ಸೂಚನೆ ನೀಡಲಾಗಿದೆ.
ಜಿಲ್ಲೆಗೆ ತುಂಗಭದ್ರಾ, ಕೃಷ್ಣಾ ಎರಡು ನದಿಗಳಿಂದ ಪ್ರವಾಹ ಭೀತಿ ಎದುರಾಗಿದ್ದು ಫ್ಲಡ ಅಲರ್ಟ್ ಘೋಷಿಸಲಾಗಿದೆ. ಪ್ರವಾಹ ಭೀತಿಯಲ್ಲಿ ರಾಯಚೂರು ಕೃಷ್ಣಾ ನದಿಗೆ ನಾರಾಯಣಪುರ ಜಲಾಶಯದಿಂದ ಇಂದು ಬೆಳಿಗ್ಗೆ 6.30 ಕ್ಕೆ 3.17 ಲಕ್ಷ ಕ್ಯೂಸೆಕ್ ನೀರು ಹರಿ ಬೀಡಲಾಗಿದ್ದು, ನದಿ ಪಾತ್ರದ ಜನರಿಗೆ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಈಗಾಗಲೇ ತಿಳಿಸಲಾಗಿದೆ. 3 ಲಕ್ಷಕ್ಕೂ ಅಧಿಕ ನೀರು ಹರಿ ಬಿಟ್ಟ ಪರಿಣಾಮ ದೇವದುರ್ಗ ಮಾರ್ಗವಾಗಿ ಸಂಪರ್ಕ ಕಲ್ಪಿಸುವ ಹೂವಿನಹಡಗಿ ಗ್ರಾಮದ ಸೇತುವೆ ಮೇಲೆ ನೀರು ಬಂದಿರುವುದರಿಂದ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.
ಇನ್ನು ತುಂಗಭದ್ರಾ ಜಲಾಶಯಕ್ಕೂ1.42 ಲಕ್ಷ ಕ್ಯೂಸೆಕ್ ಒಳಹರಿವಿನ ಪ್ರಮಾಣವಿದ್ದು, ಜಲಾಶಯದ ಹೆಚ್ಚುವರಿ 1.85 ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿ ಬೀಡಲಾಗಿದೆ. ಹೀಗಾಗಿ ಸಿಂಧನೂರು ತಾಲೂಕಿನ ಸಿಂಗಾಪುರ್, ಮುಕ್ಕುಂದ, ಒಳ ಬಳ್ಳಾರಿ, ದಢೆಸೂಗೂರು, ಮಾನವಿ ತಾಲೂಕಿನ ಚಿಕಲಪರ್ವಿ ವಿಜಯದಾಸರ ಕಟ್ಟೆ ಹಾಗೂ ರಾಯಚೂರು ತಾಲೂಕಿನ ಬಿಚ್ಚಾಲಿ, ಕಟಕನೂರು, ಹಳೆತುಂಗಭದ್ರಾ ನದಿಗೆ ತೆರಳದಂತೆ ಸೂಚಿಸಲಾಗಿದೆ. ಅಲ್ಲದೇ ತುಂಗಭದ್ರಾ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಎಲೆಬಿಚ್ಚಾಲಿ ಗ್ರಾಮದಲ್ಲಿನ ಜಪದಕಟ್ಟೆ ರಾಯರ ನವಬೃಂದವನ ಬಳಿಗೆ ನೀರು ನುಗ್ಗುತ್ತಿದ್ದು, ಬೃಂದವನ ಮುಳಗಡೆಯಾಗಲಿದೆ.ಎರಡು ನದಿಗಳು ಉಕ್ಕಿ ಹರಿಯುತ್ತಿರುವ ಹಿನ್ನಲೆ ಮುನ್ನೆಚ್ಚರಿಕಾ ಕ್ರಮವಾಗಿ ರಕ್ಷಣಾ ಪಡೆಯನ್ನ ನಿಯೋಜಿಸುವಂತೆ ಜಿಲ್ಲಾಡಳಿತ ಸರ್ಕಾರಕ್ಕೆ ಮನವಿ ಸಲ್ಲಿಸಿಲಾಗಿದೆ.
Key words: Water- Release – Tungabhadra – Narayanpur Reservoir.