ಬೆಂಗಳೂರು, ಏ.17, 2021 : (www.justkannada.in news); ಕರೋನಾ ಎರಡನೇ ಅಲೆ ಆರ್ಭಟಕ್ಕೆ ತತ್ತರಿಸಿರುವ ರಾಜ್ಯ ಸರಕಾರ ಮತ್ತಷ್ಟು ಕಠಿಣ ನಿಯಾಮವಳಿಗಳ ಜಾರಿಗೆ ಮುಂದಾಗಿದೆ.
ಈ ಪೈಕಿ ಮದುವೆ ಸಮಾರಂಭಗಳಲ್ಲಿ ಗರಿಷ್ಠ 50 ಮಂದಿ ಮಾತ್ರ ಭಾಗವಹಿಸಲು ಅವಕಾಶ ನೀಡಲು ಚಿಂತನೆ ನಡೆಸಿದ್ದು, ಇಂದು ಬೆಳಗ್ಗೆ ಸಚಿವತ್ರರು (ಕಂದಾಯ ಸಚಿವ ಆರ್.ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಡಾ.ಸುಧಾಕರ್ ) ಜಿಲ್ಲಾಧಿಕಾರಿಗಳ ಜತೆ ನಡೆಸಿದ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗಿದೆ.
ಮದುವೆಗೆ ಕೇವಲ 50 ಮಂದಿಗೆ ಮಾತ್ರ ಭಾಗವಹಿಸಲು ಪಾಸ್ ನೀಡುವುದು. ಒಂದು ವೇಳೆ ಇದನ್ನು ಉಲ್ಲಂಘಿಸಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರೆ ಅಂಥ ಕಲ್ಯಾಣ ಮಂಟಪವನ್ನು ವಶಕ್ಕೆ ಪಡೆದು ಬೀಗ ಜಡಿಯುವಂತೆ ಸೂಚಿಸಲಾಗಿದೆ.
ಹಾಲಿ, ರಾಜ್ಯ ಸರಕಾರ ಹೊರಡಿಸಿರುವ ಕೋವಿಡ್ ನಿಯಮಾವಳಿ ಪ್ರಕಾರ ಮದುವೆ ಸಮಾರಂಭದಲ್ಲಿ 200 ಮಂದಿ ಭಾಗವಹಿಸಲು ಅವಕಾಶವಿದೆ. ಆದರೆ ಸದ್ಯದ ಸ್ಥಿತಿಯಲ್ಲಿ ಹೆಚ್ಚುತ್ತಿರುವ ಕರೋನಾ ಸೋಂಕಿನ ಪ್ರಕರಣಗಳನ್ನು ಪರಿಗಣಿಸಿ ಇದನ್ನು ಮಾರ್ಪಾಡು ಮಾಡಲು ಸರಕಾರ ಉದ್ದೇಶಿಸಿದೆ ಎನ್ನಲಾಗಿದೆ.
ಈ ಸಲುವಾಗಿಯೇ ಇಂದು ನಡೆದ ಜಿಲ್ಲಾಧಿಕಾರಿಗಳ ಜತೆಗಿನ ವಿಡಿಯೋ ಸಂವಾದಲ್ಲಿ ಈ ಬಗ್ಗೆ ಚರ್ಚಿಸಿ ಅಭಿಪ್ರಾಯ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
key words: wedding ceremony-Government- thinking – JUST- 50 member- only.