ಬೆಂಗಳೂರು,ಜನವರಿ,7,2022(www.justkannada.in): ರಾಜ್ಯದಲ್ಲಿ ಕೊರೋನಾ ಮತ್ತು ಒಮಿಕ್ರಾನ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಇಂದು ರಾತ್ರಿಯಿಂದಲೇ ಮದ್ಯ ಮಾರಾಟ ಬಂದ್ ಆಗಲಿದೆ.
ಈ ಕುರಿತು ಮಾತನಾಡಿ ಮಾಹಿತಿ ನೀಡಿರುವ ಅಬಕಾರಿ ಸಚಿವ ಕೆ.ಗೋಪಾಲಯ್ಯ, ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಸೂಚನೆಯಂತೆ ಬಾರ್ ಗಳು ಬಂದ್ ಆಗಲಿವೆ. ಇಂದು ರಾತ್ರಿ 8 ಗಂಟೆಯಿಂದಲೇ ಮದ್ಯಮಾರಾಟ ಬಂದ್ ಆಗಲಿದ್ದು, ಸೋಮವಾರ ಬೆಳಿಗ್ಗೆವರೆಗೂ ಬಾರ್ ತೆರೆಯುವಂತಿಲ್ಲ.ಎರಡು ವಾರಗಳ ಕಾಲ ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ರಾಜ್ಯಾದ್ಯಂತ ರಾತ್ರಿ 8 ಗಂಟೆಗೆ ಬಾರ್ ಬಾಗಿಲು ಹಾಕಬೇಕು ಮೊದಲೇ ಸೂಚನೆ ನೀಡಿರುವ ಹಿನ್ನೆಲೆ ಮದ್ಯ ಖರೀದಿಸುವವರಿಗೆ ಸಮಸ್ಯೆಯಾಗಲ್ಲ ಎಂದು ಸಚಿವ ಗೋಪಾಲಯ್ಯ ತಿಳಿಸಿದರು.
Key words: Weekend curfew-Liquor- sales –bandh- tonight.