ಹೊಸವರ್ಷಾಚರಣೆಗೆ ಜನಜಂಗುಳಿ ಸೇರುವುದು ನಿಷೇಧಿಸುತ್ತೇವೆ : ಸಚಿವ ಕೆ.ಸುಧಾಕರ್

ಬೆಂಗಳೂರು,ಡಿಸೆಂಬರ್,03,2020(www.justkannada.in) : ಡಿ.31 ಮತ್ತು ಜ.1ರಂದು ಜನಜಂಗುಳಿ ಸೇರುವುದು ನಿಷೇಧಿಸುತ್ತೇವೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಅದಕ್ಕೆ ಬೇಕಾದ ನಿಯಂತ್ರಣಕ್ಕೆ ಆರೋಗ್ಯಾಧಿಕಾರಿಗಳ ಜೊತೆ ಮಾತನಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.logo-justkannada-mysore

ಹೊಸವರ್ಷ ನಮ್ಮದಲ್ಲ ಅದು ನಮ್ಮ ಸಂಸ್ಕೃತಿಯೂ ಅಲ್ಲ. ನಮಗೆ ಹೊಸ ವರ್ಷ ಅಂದರೆ ಯುಗಾದಿ. ಆದರೆ, ಈ ಹೊಸ ವರ್ಷ ಬರೋದು ಇಂಗ್ಲೀಷ್ ಕ್ಯಾಲೆಂಡರ್ ನಲ್ಲಿ ಎಂದು ಹೇಳಿದರು.

ಇದಲ್ಲದೆ ಪಬ್, ಬಾರ್ ಮತ್ತು ರೆಸ್ಟೋರೆಂಟ್ ನಲ್ಲಿ ಜನರ ನಿಯಂತ್ರಣ ವಿಚಾರವಾಗಿ ನಾಳಿನ ಸಭೆಯಲ್ಲಿ ಚರ್ಚೆ  ಮಾಡುತ್ತೇವೆ ಎಂದು ಸುಧಾಕರ್ ಹೇಳಿದರು. ಸಿಎಂ ಜೊತೆ ಚರ್ಚಿಸಿದ ಬಳಿಕವೇ ಅಂತಿಮ ನಿರ್ಧಾರ ಮಾಡ್ತೇವೆ ಎಂದಿದ್ದಾರೆ.

ಜೊತೆಗೆ, ತಾಂತ್ರಿಕ ಸಲಹಾ ಸಮಿತಿ ವರದಿ ನನ್ನ ಗಮನಕ್ಕೆ ಬಂದಿಲ್ಲ. ಅಧಿಕಾರಿಗಳ ಮಟ್ಟದಲ್ಲಿದೆ, ನನ್ನ ಸಚಿವಾಲಯಕ್ಕೆ ಬಂದಿಲ್ಲ. ಹೀಗಾಗಿ, ನಾಳೆ ಸಭೆ ಕರೆದು, ವರದಿ ಬಗ್ಗೆ ಚರ್ಚಿಸುತ್ತೇವೆ. ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಜೊತೆ ಚರ್ಚಿಸುತ್ತೇನೆ. ಸಮಿತಿ ವರದಿ ಬಳಿಕ ಸಿಎಂ ಬಿಎಸ್ ವೈ ಬಳಿ ಚರ್ಚಿಸುತ್ತೇನೆ. ಬಳಿಕ ತಜ್ಞರ ವರದಿ ಜಾರಿ ಮಾಡುವ ಬಗ್ಗೆ ನಿರ್ಧರಿಸುತ್ತೇವೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

We-prohibit-people-gathering-New Year-celebrations-Minister K. Sudhakar

englsih summary…

New parties will be banned. Minister K. Sudhakar
Bengaluru, Dec. 3, 2020 (www.justkannada.in): Health Minister K. Sudhakar today informed that gathering of people will be prohibited on December 31 and January 1. “Talks are on with the officials concerned in all the districts, and also discussions are held with Health Officers on the precautionary measures required to be taken.We-prohibit-people-gathering-New Year-celebrations-Minister K. Sudhakar
Celebration of the new year is not our culture. Ugadi is our new year. January 1 is the new year as per English Calendar,” he said.
Keywords: Health Minister K. Sudhakar/ ban on new year party

 

key words : We-prohibit-people-gathering-New Year-celebrations-Minister K. Sudhakar