ಪಶ್ಚಿಮ ಬಂಗಾಳ, ಮೇ 02, 2021 (www.justkannada.in):
ಪಶ್ಚಿಮ ಬಂಗಾಳ ವಿಧಾನ ಸಭೆ ಚುನಾವಣೆಯಲ್ಲಿ ಟಿಎಂಸಿ 188 ಕ್ಷೇತ್ರಗಳಲ್ಲಿ ಆರಂಭಿಕ ಮುನ್ನಡೆ ಸಾಧಿಸಿದರೆ ಬಿಜೆಪಿ 100 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಮೂಲಕ ಮತ್ತೆ ಟಿಎಂಸಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗುತ್ತಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಕ್ಷೇತ್ರದಲ್ಲಿ ಹಿನ್ನಡೆ ಸಾಧಿಸಿದ್ದರೂ ಅವರ ಪಕ್ಷ ಮಾತ್ರ ಭರ್ಜರಿ ಆರಂಭಪಡೆದಿದೆ. ಈ ಮೂಲಕ ಮತ್ತೆ ಅಧಿಕಾರದ ಗೆದ್ದುಗೆ ಏರುವುದು ಖಚಿತವಾಗುತ್ತಿದೆ.
ಮೋದಿ-ದೀದಿ ನಡುವಿನ ಬಿಗ್ ಫೈಟ್ ಎಂದೇ ಬಿಂಬಿತವಾಗಿದ್ದ ಚುನಾವಣೆಯಲ್ಲಿ ಮಮತಾ ಪಕ್ಷ ಮುನ್ನಡೆ ಸಾಧಿಸುತ್ತಿದೆ.
ಕೊರೊನಾ ಆತಂಕದ ನಡುವೆಯೂ ಮೋದಿ ಸಾಕಷ್ಟು ರ್ಯಾಲಿಗಳನ್ನು ಪಶ್ಚಿಮ ಬಂಗಾಳದಲ್ಲಿ ನಡೆಸಿದ್ದರು. ಆದರೆ ಮತದಾರ ಇದಾವುದಕ್ಕೂ ಮಣೆ ಹಾಕಿಲ್ಲ ಎಂಬುದು ದೃಢವಾಗುತ್ತಿದೆ.