ಬೆಂಗಳೂರು, ಮೇ 01, 2021 (www.justkannada.in): ವೆಸ್ಟ್ ಇಂಡೀಸ್ ನ ಬ್ಯಾಟ್ಸ್ಮನ್ ನಿಕೋಲಸ್ ಪೂರನ್ ಸಾಮಾಜಿಕ ಕಾರ್ಯವೊಂದು ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ.
ಪಂಜಾಬ್ ಕಿಂಗ್ಸ್ನ ವೆಸ್ಟ್ ಇಂಡೀಸ್ ನ ಬ್ಯಾಟ್ಸ್ಮನ್ ನಿಕೋಲಸ್ ಪೂರನ್ ತಮ್ಮ ಐಪಿಎಲ್ ಸಂಬಳದ ಒಂದು ಭಾಗವನ್ನು ದಾನ ಮಾಡಲು ನಿರ್ಧರಿಸಿದ್ದಾರೆ.
ಕೊರೊನಾ ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಹಿನ್ನೆಲೆಯಲ್ಲಿ ದೇಶಾದ್ಯಂತ ಹಲವಾರು ಜನರು ಸಾಯುತ್ತಿದ್ದಾರೆ. ಹೀಗಾಗಿ ನೆರವಿನ ಹಸ್ತ ಚಾಚಲು ಪೂರನ್ ನಿರ್ಧರಿಸಿದ್ದಾರೆ.
ಭಾರತಕ್ಕಾಗಿ ಪ್ರಾರ್ಥಿಸುವುದಾಗಿ ಹೇಳಿರುವ ನಿಕೋಲಸ್ ಪೂರನ್ ಐಪಿಎಲ್ ನನ್ನ ಸಂಬಳದ ಒಂದು ಭಾಗವನ್ನು ಈ ಬಿಕ್ಕಟ್ಟಿಗೆ ದಾನ ಮಾಡಲು ನಾನು ಬಯಸುವುದಾಗಿ ತಿಳಿಸಿದ್ದಾರೆ.