ಬೀದರ್,ಏಪ್ರಿಲ್,14,2021(www.justkannada.in): ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಸಿಎಂ ಬಿಎಸ್ ಯಡಿಯೂರಪ್ಪ ಏಪ್ರಿಲ್ 18 ರಂದು ಸರ್ವ ಪಕ್ಷ ಸಭೆ ಕರೆದಿದ್ದು ಈ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.
ಬೀದರ್ ನ ಬಸವಕಲ್ಯಾಣದಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಕೊರೊನಾ ತಡೆಗೆ ಲಾಕ್ ಡೌನ್ ಮಾಡುವುದು ಪರಿಹಾರವಲ್ಲ. ಸರ್ಕಾರದ ಹೊಣಗೇಡಿತನ, ಮುಟ್ಠಾಳತನದಿಂದ ಈ ಪರಿಸ್ಥಿತಿ ಬಂದಿದೆ. ಕೊರೊನಾ ಊರೆಲ್ಲಾ ಹರಡಿದ ನಂತರ ಈಗ ಏನು ಚರ್ಚೆ ಮಾಡುವುದು. ಯಾವ ಪುರುಷಾರ್ಥಕ್ಕೆ ಸರ್ವಪಕ್ಷ ಸಭೆ ಕರೆದಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕೊರೋನಾ ಮೊದಲನೇ ಅಲೆಯಿಂದ ಅನಾಹುತ ಉಂಟಾಗಿತ್ತು. ಈ ಬಾರಿ ತಂತ್ರಜ್ಞರು ಮಾಹಿತಿ ಕೊಟ್ಟಿದ್ದರೂ ಸರ್ಕಾರ ಅದನ್ನ ನಿರ್ಲಕ್ಷ್ಯಿಸಿದೆ. ನೈಟ್ ಕರ್ಫ್ಯೂ ಜಾರಿಯಿಂದ ಯಾವುದೇ ಪ್ರಯೋಜನವಿಲ್ಲ. ರಾತ್ರಿ ವೇಳೆ ಎಲ್ಲರೂ ಮನೆಯಲ್ಲಿರುತ್ತಾರೆ. ಬೆಳಿಗ್ಗೆ ಎಲ್ಲಾ ಜನರು ಓಡಾಡುತ್ತಿರುತ್ತಾರೆ. ಬಿಜೆಪಿಗೆ ಜನರ ಬಗ್ಗೆ ಕಾಳಜಿ ಇದ್ದಿದ್ದರೇ ತಂತ್ರಜ್ಞರು ಹೇಳಿದಾಗಲೇ ಕ್ರಮ ಕೈಗೊಳ್ಳುತ್ತಿದ್ದರು. ಕರ್ನಾಟಕದಲ್ಲಿ ಇಂತಹ ಕೆಟ್ಟ ಸರ್ಕಾರವನ್ನ ನೋಡಿರಲಿಲ್ಲ ಕೊರೋನಾದಿಂದ ಜನರನ್ನ ಆ ದೇವರೇ ಕಾಪಾಡಬೇಕು ಎಂದು ಹೆಚ್.ಡಿ ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದರು.
Key words: What- all-party -meeting –former cm- HD kumaraswamy- against -state government.