ಬೆಂಗಳೂರು,ಅ,19,2019(www.justkannada.in): ವಾಟ್ಸಪ್ ಡಿಪಿಗೆ ಅನ್ಯ ವ್ಯಕ್ತಿಯ ಫೋಟೊ ಹಾಕಿ ಅದರಲ್ಲಿ ಚಾಟ್ ಮಾಡಿ ಹಣ ಪಡೆದು ವಂಚನೆ ಮಾಡುತ್ತಿದ್ದ ವಂಚನಾ ಚಾಲವನ್ನ ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸರು ಭೇದಿಸಿದ್ದಾರೆ.
ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಬಿಟಿಎಂ ಲೇಔಟ್ ನಲ್ಲಿವಾಸವಿದ್ದ ರಮೇಶ್(29), ಮಡಿವಾಳದ ಅಶ್ವಿನ್(26), ರಾಮಮೂರ್ತಿ ನಗರದಲ್ಲಿ ವಾಸವಿದ್ದ ಸುರೇಶ್(46) ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳು ಬೇರೆ ಬೇರೆ ನಂಬರ್ ನ ವಾಟ್ಸಪ್ ಡಿಪಿಗೆ ಅನ್ಯವ್ಯಕ್ತಿಗಳ ಫೋಟೊ ಹಾಕಿ ಅದೇ ವ್ಯಕ್ತಿಯಂತೆ ನಟಿಸಿ ಆತನ ಸ್ನೇಹಿತರ ಜತೆ ಚಾಟಿಂಗ್ ಮಾಡುತ್ತಿದ್ದರು. ಹಾಗೆಯೇ ಅವರ ವಿಶ್ವಾಸ ಗಳಿಸಿ ನಂತರ ತಮ್ಮ ಹೆಂಡತಿಯ ತಂಗಿಗೆ ಅನಾರೋಗ್ಯವಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ತುರ್ತಾಗಿ ಹಣ ನೀಡಿ ಎಂದು ಹಣ ಪಡೆದು ವಂಚಿಸುತ್ತಿದ್ದರು ಎನ್ನಲಾಗಿದೆ.
ಇದೀಗ ಮೂವರು ಆರೋಪಿಗಳನ್ನ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದು, ಮೂರು ಮೊಬೈಲ್ ಮತ್ತು ಒಂದು ಎಟಿಎಂ ಕಾರ್ಡ್ ಅನ್ನ ವಶಕ್ಕೆ ಪಡೆಯಲಾಗಿದೆ.
Key words: WhatsApp DP – accused –arrest- Bangalore- police