ಬೆಂಗಳೂರು, ಮೇ 25, 2022(www.justkannada.in): ಇಂಧನ ಸಚಿವ ವಿ. ಸುನಿಲ್ ಕುಮಾರ್ ಅವರು ಮಂಗಳವಾರದಂದು ಗ್ರಾಹಕರ ಕುಂದುಕೊರತೆಗಳನ್ನು ಆಲಿಸಲು 11 ವಾಟ್ಸ್ ಆ್ಯಪ್ ಸಂಖ್ಯೆಗಳಿರುವ ಸಹಾಯವಾಣಿಗೆ ಚಾಲನೆ ನೀಡಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಸುನಿಲ್ ಕುಮಾರ್ ಅವರು ಇತ್ತೀಚೆಗೆ ಸುರಿದಂತಹ ಭಾರಿ ಮಳೆಯಿಂದಾಗಿ ಬೆಸ್ಕಾಂಗೆ ದೂರುಗಳ ಸುರಿಮಳೆಯಾಯಿತು. ಗ್ರಾಹಕರ ಕುಂದುಕೊರತೆಗಳನ್ನು ಆಲಿಸಲು ಮತ್ತು ದೂರುಗಳನ್ನು ದಾಖಲಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸಲು ವಾಟ್ಸ್ಆ್ಯಪ್ ಸಂಖ್ಯೆಗಳನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ ೧೯೧೨ ಬೆಸ್ಕಾಂನ ಸಹಾಯವಾಣಿ ಸಂಖ್ಯೆಯಾಗಿದೆ. ಈ ೧೧ ವಾಟ್ಸ್ ಆ್ಯಪ್ ಸಂಖ್ಯೆಗಳು ಈ ಹಾಲಿ ಸಹಾಯವಾಣಿ ಸಂಖ್ಯೆಗೆ ಸೇರ್ಪಡೆಯಾಗಿದ್ದು, ಬೆಸ್ಕಾಂ ಕಾರ್ಯವ್ಯಾಪ್ತಿಯಡಿ ಬರುವ ಎಂಟು ಜಿಲ್ಲೆಗಳನ್ನು ಒಳಗೊಂಡಿದೆ. ಆ ಎಂಟು ಜಿಲ್ಲೆಗಳು ಯಾವುವೆಂದರೆ ಬೆಂಗಳೂರು ನಗರ (ದಕ್ಷಿಣ, ಉತ್ತರ, ಪಶ್ಚಿಮ ಹಾಗೂ ಪೂರ್ವ), ದಾವಣಗೆರೆ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ. ಸಹಾಯವಾಣಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಗ್ರಾಹಕ ಸೇವಾ ಕಾರ್ಯನಿರ್ವಾಹಕರು ಗ್ರಾಹಕರು ವಾಟ್ಸ್ಆ್ಯಪ್ ಮೂಲಕ ಸಲ್ಲಿಸುವ ದೂರುಗಳು ಹಾಗೂ ಸಂದೇಶಗಳನ್ನು ಗಮನಿಸಿ, ಸಮಸ್ಯೆಗಳನ್ನು ಬಗೆಹರಿಸಲು ಆಯಾ ಪ್ರದೇಶದ ಬೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಂಯೋಜಿಸುತ್ತಾರೆ.
ವಾಟ್ಸ್ ಆ್ಯಪ್ ಸಹಾಯವಾಣಿ ಸಂಖ್ಯೆಗಳು:
ಬೆಂಗಳೂರು ನಗರ (ದಕ್ಷಿಣ): ೮೨೭೭೮೮೪೦೧೧
ಬೆಂಗಳೂರು ನಗರ (ಪಶ್ಚಿಮ): ೮೨೭೭೮೮೪೦೧೨
ಬೆಂಗಳೂರು ನಗರ (ಪೂರ್ವ): ೮೨೭೭೮೮೪೦೧೩
ಬೆಂಗಳೂರು ನಗರ (ಉತ್ತರ): ೮೨೭೭೮೮೪೦೧೪
ಕೋಲಾರ: ೮೨೭೭೮೮೪೦೧೫
ಚಿಕ್ಕಬಳ್ಳಾಪುರ: ೮೨೭೭೮೮೪೦೧೬
ಬೆಂಗಳೂರು ಗ್ರಾಮಾಂತರ: ೮೨೭೭೮೮೪೦೧೭
ರಾಮನಗರ: ೮೨೭೭೮೮೪೦೧೮
ತುಮಕೂರು: ೮೨೭೭೮೮೪೦೧೯
ಚಿತ್ರದುರ್ಗ: ೮೨೭೭೮೮೪೦೨೦
ದಾವಣಗೆರೆ: ೮೨೭೭೮೮೪೦೨೧
Key words: WhatsApp- Helpline -Bescom -customer -convenience