ನವದೆಹಲಿ, ನವೆಂಬರ್, 24, 2019 (www.justkannada.in): ಫೇಸ್ಬುಕ್ ಒಡೆತನದ ವಾಟ್ಸ್ಆ್ಯಪ್ ತನ್ನ ಗ್ರಾಹಕರ ಮೇಲೆ ಗೂಢಾಚರ್ಯೆ ನಡೆಸುತ್ತಿರುವ ಅಪವಾದಕ್ಕೆ ಗುರಿಯಾಗಿದೆ. ಇದೇ ಹಿನ್ನೆಲೆಯಲ್ಲಿ ಟೆಲಿಗ್ರಾಂ ಸಂಸ್ಥಾಪಕ ಪ್ಯಾರೆಲ್ ಡುರೊವ್ ಕೆಲ ವಿಷಯಗಳ ಕುರಿತು ಬೆಳಕು ಚೆಲ್ಲಿದ್ದಾರೆ.
ಜನ ವಾಟ್ಸ್ಆ್ಯಪ್ ಅನ್ನು ತಮ್ಮ ಮೊಬೈಲ್ಗಳಿಂದ ಅನ್ಇನ್ಸ್ಟಾಲ್ ಮಾಡಬೇಕು ಎಂದು ಟೆಲಿಗ್ರಾಂ ಮೆಸೇಜಿಂಗ್ ಆ್ಯಪ್ನ ಸಂಸ್ಥಾಪಕ ಪ್ಯಾರೆಲ್ ಡುರೊವ್ ಸಲಹೆ ನೀಡಿದ್ದಾರೆ.
ತಮ್ಮ ಟೆಲಿಗ್ರಾಂ ಚಾನಲ್ ಮೂಲಕ ಈ ಸಂದೇಶ ರವಾನಿಸಿರುವ ಅವರು, ನಿಮ್ಮ ಖಾಸಗಿ ಫೋಟೊಗಳು, ಸಂದೇಶಗಳು ಮುಂದೊಂದು ದಿನ ಹೊರ ಜಗತ್ತಿಗೆ ಬಹಿರಂಗವಾಗುವುದು ನಿಮಗೆ ಇಷ್ಟ ಇಲ್ಲ ಎಂದಾದರೆ ಕೂಡಲೇ ಅದನ್ನು ನಿಮ್ಮ ಮೊಬೈಲ್ಗಳಿಂದ ಕಿತ್ತೆಸೆಯಿರಿ ಎಂದು ಅವರು ಮನವಿ ಮಾಡಿದ್ದಾರೆ.