ಅಡುಗೆ ಸಿಬ್ಬಂದಿ, ಮುಖ್ಯ ಶಿಕ್ಷಕರ ನಿರ್ಲಕ್ಷ್ಯ: ಮಕ್ಕಳಿಗೆ ಸಿಗಬೇಕಿದ್ದ ಪೌಷ್ಟಿಕ ಆಹಾರ ಗೋಧಿಗೆ ಬೆಂಕಿ

ಮೈಸೂರು,ನವೆಂಬರ್,28,2024 (www.justkannada.in):  ಮಕ್ಕಳಿಗೆ ಸಿಗಬೇಕಿದ್ದ ಪೌಷ್ಟಿಕ ಆಹಾರ ಗೋಧಿಗೆ ಬೆಂಕಿ ಹಾಕಿರುವ  ಘಟನೆ  ಮೈಸೂರು ಜಿಲ್ಲೆ ಎಚ್.ಡಿ ಕೋಟೆ ತಾಲೂಕಿನ ಅಂತರಸಂತೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ .

ಅಡುಗೆ ಸಿಬ್ಬಂದಿ, ಮುಖ್ಯಶಿಕ್ಷಕರ ನಿರ್ಲಕ್ಷ್ಯದಿಂದ ನಾಲ್ಕರಿಂದ ಐದು ಗೋಧಿ ಮೂಟೆಗಳಲ್ಲಿ ಹುಳು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಇಲಾಖೆಗೆ ಮಾಹಿತಿ ನೀಡದೆ ಸಿಬ್ಬಂದಿಗಳೇ ಗೋಧಿ ಮೂಟೆಯನ್ನು ಸುಟ್ಟು ಹಾಕಿರುವ ಶಂಕೆ ವ್ಯಕ್ತವಾಗಿದೆ.

1 ರಿಂದ 7ನೇ ತರಗತಿವರೆಗೆ 200ಕ್ಕೂ ಹೆಚ್ಚು ಬಡ ಮಕ್ಕಳು ಶಾಲೆಯಲ್ಲಿ ಓದುತ್ತಿದ್ದಾರೆ. ಬಿಸಿಯೂಟಕ್ಕಾಗಿ ಸರ್ಕಾರ ಪ್ರತಿ ತಿಂಗಳು ಸಾವಿರಾರು ರೂ ಖರ್ಚು ಮಾಡಿ ಆಹಾರ ಪದಾರ್ಥ ಪೂರೈಕೆ ಮಾಡುತ್ತಿದೆ.ಆದರೆ ಮಕ್ಕಳಿಗೆ ಆಹಾರ ಮಾಡಿ ಕೊಡದೆ ಗೋಧಿಯನ್ನು ಹಾಗೆಯೇ ಶೇಖರಣೆ ಇಟ್ಟಿದ್ದಾರೆ. ಇದರಿಂದ ಗೋಧಿ ಮೂಟೆಯಲ್ಲಿ ಹುಳ ಕಾಣಿಸಿಕೊಂಡಿದ್ದು, ಯಾರಿಗು ಗೊತ್ತಾಗಬಾರದೆಂದು ಶಾಲೆಯ ಹಿಂಭಾಗದಲ್ಲಿ ಗೋಧಿ ಮೂಟೆಗಳಿಗೆ ಸಿಬ್ಬಂದಿಗಳೇ ಬೆಂಕಿ ಹಾಕಿ ಸುಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: mysore, Wheat, fire, food, School