ಮೈಸೂರು,ಜನವರಿ,22,2021(www.justkannada.in) : ಯಾವ ಪಕ್ಷದವರು, ಯಾವ ಸಂಘಟನೆಯವರು ಫ್ಲೆಕ್ಸ್ , ಬ್ಯಾನರ್ ಹಾಕೋದು ಬೇಡ. ಈ ಕುರಿತು ಎಲ್ಲಾ ರಾಜಕೀಯ ಪಕ್ಷಗಳಿಗೂ ಅಫೀಲ್ ಮಾಡೀದ್ದೀವಿ. ಪಕ್ಷದ ಪದಾಧಿಕಾರಿಗಳನ್ನ ಕರೆಸಿ ಸೂಚನೆ ನೀಡ್ತೀವಿ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಹೇಳಿದ್ದಾರೆ.
ಮೈಸೂರಲ್ಲಿ ಪ್ಲೆಕ್ಸ್ ಬ್ಯಾನರ್ ಅಳವಡಿಕೆಗೆ ನಿರ್ಬಂಧ ಹಿನ್ನೆಲೆ, ರಾಜಕೀಯ ಪಕ್ಷಗಳ ಬ್ಯಾನರ್ ಅಳವಡಿಕೆಗೂ ನಿರ್ಬಂಧ ವಿಧಿಸಲಾಗಿದೆ. ನಗರದಲ್ಲಿ ಜನ್ಮದಿನ, ಶ್ರದ್ದಾಂಜಲಿ ಬ್ಯಾನರ್ ಅಳವಡಿಸುತ್ತಿರುವುದು ಗಮನಕ್ಕೆ ಬಂದಿದೆ. ಅನಧಿಕೃತ ಪ್ಲೆಕ್ಸ್ ಹಾಕುತ್ತಿರುವ ಬಗ್ಗೆ ಗಮನಹರಿಸಲು ಪೊಲೀಸರಿಗೂ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ನಗರದಲ್ಲಿ ಪಾಲಿಕೆ ಅಧಿಕಾರಿಗಳು ಈಗಾಗಲೇ ಕಾರ್ಯಾಚರಣೆ ಆರಂಭಿಸಿ ದಂಡವಿಧಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಜನರು ಅರ್ಥಮಾಡಿಕೊಂಡು ಪಾಲಿಕೆಯೊಂದಿಗೆ ಸಹಕರಿಸಬೇಕು. ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
key words : Whichever party-organizers-should not-Flex- Banner-palike-Commissioner-Gurudat Hegde