ಬೆಂಗಳೂರು, ಸೆಪ್ಟೆಂಬರ್ 26, 2020 (www.justkannada.in): ಅವಿಶ್ವಾಸ ಮಂಡನೆ ಹಿನ್ನಲೆಯಲ್ಲಿ ಎಲ್ಲಾ ಬಿಜೆಪಿ ಶಾಸಕರು ಸದನಕ್ಕೆ ಕಡ್ಡಾಯವಾಗಿ ಹಾಜರಿರಬೇಕು ಎಂದು ಸಿಎಂ ಯಡಿಯೂರಪ್ಪ ವಿಪ್ ಜಾರಿಮಾಡಿದ್ದಾರೆ.
ಶುಕ್ರವಾರ ಸಂಜೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ, ಕೋವಿಡ್ ಪಾಸಿಟಿವ್ ಇರುವವರು ದೂರವಿರಲು ವಿಶೇಷ ಅನುಮತಿ ಕೋರಿದವರನ್ನು ಹೊರತುಪಡಿಸಿ 80 ಶಾಸಕರು ಉಪಸ್ಥಿತರಿದ್ದರು.
ಕಾಂಗ್ರೆಸ್ಗಿಂತ ಬಿಜೆಪಿ ಸದಸ್ಯರು ಹೆಚ್ಚಿದ್ದರೂ ಕೊರೋನಾ ಹಿನ್ನಲೆ ಸರ್ಕಾರದ ಅನೇಕ ಸಚಿವರು, ಶಾಸಕರು ಹಾಜರಾಗುವಂತೆ ಇಲ್ಲ. ಈ ಹಿನ್ನಲೆ ಸರ್ಕಾರ ವಿಪ್ ಜಾರಿ ಮೊರೆ ಹೋಗಿದೆ.