ಜಿನಿವಾ,ಜನವರಿ,1,2021(www.justkannada.in): ಫೈಜರ್- ಬಯೋಟೆಕ್ ಕೋವಿಡ್ ಲಸಿಕೆಗೆ ತುರ್ತು ಬಳಕೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ನೀಡಿದೆ. ಫೈಜರ್ ಲಸಿಕೆ ಈಗಾಗಲೇ ಇಂಗ್ಲೆಂಡ್, ಅಮೆರಿಕ, ಕೆನಡಾ, ಯುರೋಪ್ ನ ಕೆಲವು ದೇಶಗಳಲ್ಲಿ ತುರ್ತು ಬಳಕೆಗೆ ಅನುಮತಿ ನೀಡಲಾಗಿದ್ದು, ಬಳಸಲಾಗುತ್ತಿದೆ.
ಜಗತ್ತಿನಾದ್ಯಂತ ತುರ್ತು ಅವಶ್ಯಕತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸಭೆಯಲ್ಲಿ ಫಿಜರ್-ಬಯೊಟೆಕ್ ಲಸಿಕೆಯನ್ನು ತುರ್ತು ಬಳಕೆಗೆ ಬಳಸಬಹುದು ಎಂದು ತೀರ್ಮಾನ ಕೈಗೊಂಡಿದೆ. ಕಳೆದ ವರ್ಷ ಚೀನಾದಲ್ಲಿ ಕೊರೋನವೈರಸ್ ಮೊದಲ ಬಾರಿಗೆ ಕಾಣಿಸಿಕೊಂಡು ವ್ಯಾಪಕವಾಗಿ ಹಬ್ಬಿದ ನಂತರ ಅದರ ವಿರುದ್ಧ ಹೋರಾಡಲು ಫೈಜರ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಮೊದಲ ಬಾರಿಗೆ ಅನುಮತಿ ನೀಡುತ್ತಿದೆ.
ಯುಎಸ್-ಜರ್ಮನ್ ಲಸಿಕೆಯೊಂದಿಗೆ ಕಳೆದ ಡಿಸೆಂಬರ್ 8 ರಂದು ಬ್ರಿಟನ್ ರೋಗಾಣು ವಿರುದ್ಧ ಹೋರಾಡುವ ಲಸಿಕೆಯನ್ನು ಪ್ರಾರಂಭಿಸಿತು, ಅಮೆರಿಕ, ಕೆನಡಾ ಮತ್ತು ಐರೋಪ್ಯ ಒಕ್ಕೂಟ ದೇಶಗಳು ಇದನ್ನು ಅನುಸರಿಸುತ್ತವೆ.
Key words: WHO green signal- emergency- use – Pfizer vaccine.