ಅಯೋಧ್ಯೆ ದೇಶದ ಅಭಿವೃದ್ದಿಗೆ ದಿಕ್ಸೂಚಿ: ಇಡೀ ಜಗತ್ತು ಜ.22ರ ಐತಿಹಾಸಿಕ ಕ್ಷಣಕ್ಕಾಗಿ ಕಾಯುತ್ತಿದೆ- ಪ್ರಧಾನಿ ಮೋದಿ.

ಅಯೋಧ್ಯೆ,ಡಿಸೆಂಬರ್,30,2023(www.justkannada.in): ಇಡೀ ಭಾರತದ ಪ್ರಗತಿ ಅಯೋಧ್ಯೆಯಲ್ಲಿ ಕಾಣುತ್ತಿದೆ. ಅಯೋಧ್ಯೆ ದೇಶದ ಅಭಿವೃದ್ದಿಗೆ ದಿಕ್ಸೂಚಿ. ಇಡೀ ಜಗತ್ತು ಜನವರಿ 22ರ ಐತಿಹಾಸಿಕ ಕ್ಷಣಕ್ಕಾಗಿ ಕಾಯುತ್ತಿದೆ ಎಂದು  ಪ್ರಧಾನಿ ನರೇಂದ್ರ ಮೋದಿ ನುಡಿದರು.

ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಿರುವ ‘ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯಧಾಮ’ ಎಂದು ಹೆಸರಿಡಲಾದ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

ಬಳಿಕ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತದ ಜನ ಜನವರಿ 22ಕ್ಕಾಗಿ ಕಾಯುತ್ತಿದ್ದಾರೆ. ಭಾರತ ಮಣ್ಣಿನ ಕಣ ಕಣದ ಪೂಜಾರಿ ನಾನು. ನಾನೂ ಸಹ ಆ ಕ್ಷಣಕ್ಕಾಗಿ ಉತ್ಸಾಹದಿಂದ ಕಾಯುತ್ತಿದ್ದೇನೆ. ಅಯೋಧ್ಯೆಯ ಗಲ್ಲಿ ಗಲ್ಲಿಗಳಲ್ಲೂ ಸಂಭ್ರಮ ಶುರುವಾಗಿದೆ. ಮೊದಲು ಶ್ರೀರಾಮ ಟೆಂಟಿನಲ್ಲಿ ವಾಸವಾಗಿದ್ದ. ಈಗ ರಾಮನ ಭವ್ಯ ಮಂದಿರ ನಿರ್ಮಾಣವಾಗುತ್ತಿದೆ. ಅಯೋಧ್ಯೆಯಲ್ಲಿ ನಮ್ಮ ಪರಂಪರೆ, ಉತ್ಸವ ನಡೆಯುತ್ತಿದೆ. ಇದು ಭಾರತ- ವಿಕಾಸ ಹಾಗೂ ಪರಂಪರೆಯ ಸಮ್ಮಿಲನ ಎಂದು ಬಣ್ಣಿಸಿದರು.

ವಿಕಾಶ ಮತ್ತು ಅವಕಾಶದಿಂದಲೇ ಅಭಿವೃದ್ಧಿ ಸಾಧ್ಯ. ಕೋವಿಡ್ ಮಧ್ಯೆಯೂ  ಅಭಿವೃದ್ದಿ ಶುರುವಾಗಿದೆ. ದೇಶದ 2 ಲಕ್ಷ ಮನೆಗಳಿಗೆ ನೀರು ಪೂರೈಸಿದ್ದೇವೆ. ದೇಶದ 4 ಕೋಟಿ ಜನರಿಗೆ ಸ್ವಂತ ಮನೆ ಸಿಕ್ಕಿದೆ. ದೇಶದಲ್ಲಿ 300ಕ್ಕೂ ಹೆಚ್ಚು ಮೆಡಿಕಲ್ ಕಾಲೇಜು ನಿರ್ಮಾಣವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ನಾವು ನಮ್ಮ ಪರಂಪರೆಯನ್ನು ಗುರುತಿಸಬೇಕು. ನಮ್ಮ ಪರಂಪರೆ ನಮಗೆ ಸ್ಫೂರ್ತಿ ನೀಡುತ್ತದೆ. ಇದೇ ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಗುಡಾರದಲ್ಲಿ ಕುಳಿತಿದ್ದ ಕಾಲವಿತ್ತು ಮತ್ತು ಇಂದು ರಾಮ ಲಲ್ಲಾ ಮಾತ್ರವಲ್ಲ, ದೇಶದ ನಾಲ್ಕು ಕೋಟಿ ಬಡವರಿಗೂ ಶಾಶ್ವತ ಮನೆ ಸಿಕ್ಕಿದೆ  ಎಂದು ಮೋದಿ ತಿಳಿಸಿದರು.

Key words: whole world – waiting- historic moment – January 22- PM -Modi.