ಬೆಂಗಳೂರು, ಡಿಸೆಂಬರ್ 18, 2022 (www.justkannada.in): ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳು ನಡೆಯದಿರುವುದು ದೇಶವು (ಪಾಕಿಸ್ತಾನ) ಮುಳುಗುವ ಸಂಕೇತವಾಗಿದೆ ಎಂಬ ಭಯ ಕಾಡುತ್ತಿದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಇಮ್ರಾನ್ ಖಾನ್ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ. ಇಲ್ಲದಿದ್ದರೆ ದೇಶವು ಮುಳುಗಬಹುದು ಎಂಬ ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನದ ಸಮಸ್ಯೆಗಳಿಗೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯೊಂದೇ ಪರಿಹಾರ. ಸೋಲುವ ಭೀತಿಯಿಂದಾಗಿ ಸರ್ಕಾರ ಹೊಸ ಚುನಾವಣೆಗಳಿಗೆ ಹೆದರುತ್ತಿದೆ. ಸರ್ಕಾರಕ್ಕೆ ಚುನಾವಣೆ ಮೂಲಕ ತಕ್ಕ ಪಾಠ ಕಲಿಸಬೇಕು ಎಂದು ಇಮ್ರಾನ್ ಖಾನ್ ತಿಳಿಸಿ್ದಾರೆ.
ಜತೆಗೆ ಶೆಹಬಾಜ್ ಷರೀಫ್ ಸರ್ಕಾರದ ಅಡಿಯಲ್ಲಿ ದೇಶದ ಪ್ರಸ್ತುತ ಆರ್ಥಿಕ ಪರಿಸ್ಥಿತಿಯ ಬಗ್ಗೆ ಇಮ್ರಾನ್ ಖಾನ್ ಕಳವಳ ವ್ಯಕ್ತಪಡಿಸಿದ್ದಾರೆ.